

ಕೂಡ್ಲಿಗಿ;ಜೀವಂತವಾಗಿರುವ ಮಹಿಳೆ ಸತ್ತಿರೋದಾಗಿ ಘೋಷಿಸಿರುವ ಆಹಾರ ಇಲಾಖೆ:- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಅಂಜಿನಮ್ಮ ಎನ್ನುವ ಮಹಿಳೆಯೋರ್ವಳು, ಆಹಾರ ಇಲಾಖೆಯ ಯಡವಟ್ಟು ಮಾಡಿರುವ ಹಿನ್ನಲೆಯಲ್ಲಿ. ಅವಳು ಜೀವಂತ ಕಣ್ಣಿದೆರು ನಿಂತಿದ್ದರೂ ಕೂಡ, ಆಹಾರ ಇಲಾಖಾಧಿಕಾರಿ ಪ್ರಕಾರ ಪಡಿತರ ಚೀಟಿಯಲ್ಲಿ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನು ವಾರ್ಡನ ಸದಸ್ಯರಾದ ಸಿರಿಬಿ ಮಂಜುನಾಥ ಮಾತನಾಡಿ, ಆಹಾರ ಇಲಾಖೆಯ ನಿರ್ಲಕ್ಷ್ಯ ನಡೆಯನ್ನು ಖಂಡಿಸಿದ್ದಾರೆ. ಅಂಜಿನಮ್ಮ ತೀರಾ ಖಡು ಬಡವರಿದ್ದು, ಆಹಾರ ಇಲಾಖೆಯ ಎಡವಟ್ಟು ನಿಂದಾಗಿ ಅವರು ಸೌಕರ್ಯಗಳಿಂದ ವಂಚಿಯರಾಗಿದ್ದಾರೆ. ಸಂಬಂಧಿಸಿದಂತೆ ಆಹಾರ ಇಲಾಖೆ ಕೂಡಲೇ ಲೋಪ ಸರಿಪಡಿಸಬೇಕಿದೆ, ಆಹಾರ ಇಲಾಖಾಧಿಕಾರಿ ಅವರ ಮನೆಗೆ ತೆರಳಿ ಸಮಾಧಾನ ಮಾಡಿ ಸೌಕರ್ಯ ಕಲ್ಪಿಸುವಂತೆ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು. ವಾಲ್ಮೀಕಿ ಸಮುದಾಯದ ಮುಖಂಡ ಕನಕೇರಿ ಪೆನ್ನಣ್ಣ ಮಾತನಾಡಿ, ಆಹಾರ ಇಲಾಖೆಯ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧವಾಗಿದ್ದು. ಶೀಘ್ರವೇ ಲೋಪ ಸರಿಪಡಿಸಬೇಕಿದೆ ಅಂಜಿನಮ್ಮ ಕುಟುಂಬಕ್ಕೆ, ಆಹಾರ ಇಲಾಖೆಯಿಂದ ಒದಗಿಸಬಹುದಾದ ಸೌಕರ್ಯಗಳನ್ನು ಸಮರ್ಪಕವಾಗಿ ಸಕಾಲಕ್ಕೆ ಕಲ್ಪಿಸಬೇಕಿದೆ. ವಿಳಂಬ ಮಾಡಿದರೆ ಆಹಾರ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು, ಹಾಗೂ ಇಲಾಖೆಯ ಅಮಾನವೀಯ ನಡೆ ಖಂಡಿಸಿ ಕಾನೂನು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ