ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದು ನೀರಿಗೆ ಹಾಹಾಕಾರ ಏರ್ಪಟ್ಟಿದೆ ಪ್ರತಿದಿನ ಟ್ಯಾಂಕರ್ ಗಳಲ್ಲಿ ನೀರುಗಳನ್ನು ಪೂರೈಸಲಾಗುತ್ತಿದ್ದು ಆದರೂ ನೀರಿನ ಸಮಸ್ಯೆ ಪರಿಹಾರ ಮಾಡಲು ಆಗುತ್ತಿಲ್ಲ ಈ ಸಮಸ್ಯೆಗೆ ಭಟ್ಕಳವೂ ಕೂಡ ಹೊರತಾಗಿಲ್ಲ. ಆದರೆ ಭಟ್ಕಳದ ಸಾಗರ ರಸ್ತೆಯಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ವಿಪರ್ಯಾಸವೇ ಸರಿ. ಭಟ್ಕಳ ಪುರಸಭೆಯ ದಿವ್ಯ ನಿರ್ಲಕ್ಷದಿಂದ ಪ್ರತಿದಿನ ಸಾವಿರಾರು ಕ್ಯೂಸೆಕ್ಸ್ ನೀರು ಚರ0ಡಿಯ ಪಾಲಾಗುತ್ತಿದೆ. ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಸುಮಾರು 15 ದಿನ ಕಳೆದಿದೆ ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸದೆ ಗಾಡ ನಿದ್ರೆಯಲ್ಲಿದ್ದಂತೆ ಕಾಣುತ್ತಿದೆ. ಪ್ರತಿದಿನ ಸಾವಿರಾರು ಕ್ಯೂಸೆಕ್ಸ್ ನೀರು ಸಾರ್ವಜನಿಕರ ಬಳಕೆಗೆ ಬಾರದೆ ಪೋಲಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ನಿದ್ರೆಯಿಂದ ಎದ್ದು ಬರುವರೇ ಎಂದು ಕಾದುನೋಡಬೇಕಾಗಿದೆ.
” ಕುಡಿಯುವ ನೀರು ಪೋಲಾಗುತ್ತಿದ್ದು” ಅಧಿಕಾರಿಗಳು ಮಾತ್ರ ನಿದ್ರೆ ಮಾಡುತ್ತಿದ್ದಾರೆ
