
ಹೊನ್ನಾವರ ಮಂಕಿಯ ರಾಷ್ಟ್ರೀಯ ಹೆದ್ದಾರಿ ಗುಳದಕೇರಿ ಬಳಿ ಆಕ್ಟಿವ ಹೊಂಡ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು. ಕೆಎಸ್ಆರ್ಟಿಸಿ ಬಸ್ ಬಡಿದ ರಭಸಕ್ಕೆ ತಾಯಿ ಮಗಳು ಹಾಗೂ ಆಕ್ಟಿವ ಹೊಂಡ ಬಸ್ಸಿನಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ತಾಯಿ ಮಗಳನ್ನು ಭಟ್ಕಳ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲಕ್ಕೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಮುರುಡೇಶ್ವರ ಮಾವಳ್ಳಿಯ ನಾಡಾವರ ಕೇರಿ ನಿವಾಸಿ ಸವಿತಾ ರಾಜು ಆಚಾರಿ ವಯಸ್ಸು 40, ಮಗಳು ಅಂಕಿತ ಆಚಾರಿ ವಯಸ್ಸು 17 ಎಂದು ತಿಳಿದು ಬಂದಿದೆ. ಸಾರಸ್ವತ್ ಕೇರಿಯ ತಾಯಿ ಮನೆಗೆ ಮಗಳೊಂದಿಗೆ ಬಂದಿದ್ದ ಸವಿತಾ ಆಚಾರಿ ಅವರು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಮಂಗಳೂರಿನಿಂದ ಬೆಳಗಾವಿಯ ಕಡೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಮಂಕಿ ಜಾತ್ರೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಸ್ ಚಾಲಕ ಬೆಳಗಾವಿ ಸವದತ್ತಿಯ ಫಕೀರಪ್ಪ ಬಸಪ್ಪನ ಮೇಲೆ ಪ್ರಕರಣ ದಾಖಲಾಗಿದೆ.