ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೌಟುಂಬಿಕ ಕಲಹದಿಂದಾಗಿ ನೊಂದ ಒಂದೇ ಕುಟುಂಬದ ಮೂವರು, ಅಂದರೆ ತಂದೆ ಹಾಗೂ ಇಬ್ಬರು ಮಕ್ಕಳು. ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ, ಖಾನಾ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ತಾಲೂಕಿನ ಕೆಂಚೋಬನಹಳ್ಳಿ ಗ್ರಾಮದಲ್ಲಿ ಫೆ 17ರಂದು ಜರುಗಿದೆ. ಆತ್ಮ ಹತ್ಯೆಗೆ ಯತ್ನಿಸಿದ ಕುಟುಂಬದ ಯಜಮಾನ(ತಂದೆ)ಮಾರಪ್ಪ (38), ಈತನ ಮಕ್ಕಳಾದ ರಮೇಶ(18), ಚಂದನ(16), ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಇವರಿಗೆ ಚಿಕ್ಕ ಜೋಗಿಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ, ತದನಂತರ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಚೇತರಿಕೆ ಕಾಣದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲೆಂದು ರವಾನಿಸಲಾಗಿದೆ. ಪ್ರಕರಣ ನಾನಾ ತಿರುವು ಪಡೆದುಕೊಳದಳುತ್ತಿದ್ದು, ಸಂಬಂಧಿಸಿದಂತೆ ದಲಿತ ಯುವ ಮುಖಂಡ ಹೇಳಿಕೆ ನೀಡಿದ್ದಾರೆ ಮತ್ತು ಪ್ರಕರಣ ಸಂಬಂಧಿಸಿದಂತೆ ಕಾಲ್ ವಾಯ್ಸ್ ರೆಕಾರ್ಡ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ✍ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428