ಕೂಡ್ಲಿಗಿ:ಸಾಮಾಜಿಕ ನ್ಯಾಯ ದಿನಾಚರಣೆ-ಫೆ20 ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಸಮಿತಿ, ಮಾಜಿ ದೇವದಾಸಿಯರ ಸಂಘ, ವಿವಿದ ಇಲಾಖೆಗಳ ಸಹಯೋಗದೊಂದಿಗೆ. ಸಾಮಾಜಿಕ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸಲಾಯಿತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಯೋಗೇಶವರು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ , ಹಾಗೂ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಗುನ್ನಳ್ಳಿ ನಾರಾಯಣಪ್ಪ. ದಿನಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಎಮ್.ಮಲ್ಲಿಕಾರ್ಜುನಯ್ಯ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿಲ್ಪ, ಮಾತನಾಡಿದರು. ವಕೀಲರಾದ ಡಿಕೆಬಿ ರಾಜು, ಹೆಚ್.ವೆಂಕಟೇಶ, ರಮೇಶ ವೇದಿಕೆಯಲ್ಲಿದ್ದರು. ಮಾಜಿ ದೇವದಾಸಿಯರು ಉಪಸ್ಥಿತರಿದ್ದರು. ಸ್ನೇಹ ಸಂಸ್ಥೆ ಹಾಗೂ ವಿಮುಕ್ತಿ ಸಂಘದ ಪಾದಾಧಿಕಾರಿಗಳು, ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಮಾಜಿ ದೇವದಾಸಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.✍ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428