2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಆಗದೇ ಇರುವ ಖಾಸಗಿ ಪ್ರೌಢ ಶಾಲೆಗಳ ಎಸ್ ಎಸ್ ಎಲ್ ಸಿ ಪರೀಕ್ಷೆ -1ರ ಕರಡು ಪ್ರವೇಶ ಪತ್ರಗಳನ್ನು ತಡೆ ಹಿಡಿದಿರುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ \ಏಪ್ರಿಲ್ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಕ್ಕೆ ಮಕ್ಕಳ ನೊಂದಣಿ ಮಾಡಿಕೊಂಡಿರುವ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳು ಮಾನ್ಯತೆ ನವೀಕರಣ ಆಗಿರುದೆಯೇ / ಇಲ್ಲವೇ ಎಂಬುದರ ಬಗ್ಗೆ ಮಂಡಲಿಗೆ ಮಾಹಿತಿ ನೀಡಲು ಉಲ್ಲೇಖ-1ರಲ್ಲಿ ತಿಳಿಸಲಾಗಿರುತ್ತದೆ.