ಉ.ಕ.ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಅನಂತ್ ಮೂರ್ತಿ ಹೆಗಡೆ ಪಾದಯಾತ್ರೆ ಬುಧವಾರ ಭಟ್ಕಳ ತಲುಪಿತು.ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಫೆ.೫ ರಂದು ಕುಮಟಾದಿಂದ ಆರಂಭಗೊಂಡ ಸ್ವಾಭಿಮಾನಿ ಪಾದ ಯಾತ್ರೆ ಸಚಿವ ಮಾಂಕಾಳ ವೈದ್ಯರಿಗೆ ಮನವಿ ಸಲ್ಲಿಸುವುದರ ಮೂಲಕ ಭಟ್ಕಳದಲ್ಲಿ ಕೊನೆ.
ಈ ಸಂದರ್ಭದಲ್ಲಿ ಮಾತನಾಡಿ ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದಿದ್ದರೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಛೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಕೂಗಿಗೆ ಉಸ್ತುವಾರಿ ಸಚಿವರು ಸ್ಪಂದಿಸಿ ಹಣ ಬಿಡುಗಡೆ ಮಾಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.
ಈ ಹಿಂದೆ ಕುಮಟಾದ ಶಾಸಕ ದಿನಕರ್ ಶೆಟ್ಟಿಯವರು, ವಕೀಲ ಆರ್. ಜಿ. ನಾಯ್ಕರವರು ಹೀಗೆ ಅನೇಕರು ಸೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಾಕಷ್ಟು ಹೋರಟ ಮಾಡಿದ ಫಲವಾಗಿ ಕುಮಟಾದಲ್ಲಿ ಆಸ್ಪತ್ರೆ ಮಂಜೂರು ಮಾಡಿಸಿದ್ದರು, ಆದರೆ ಈ ಸರ್ಕಾರದಲ್ಲಿ ಆಸ್ಪತ್ರೆಗೆ ಹಣವನ್ನು ಕೊಡುವ ಕೆಲಸವಾಗಿಲ್ಲ, ಆದ್ದರಿಂದ ಇಂದು ನಮ್ಮವರು ಮಾಡಿದ ಹೋರಾಟವೆಲ್ಲ ವ್ಯರ್ಥವಾಗುತ್ತದೆ. ಇದೇ ತಿಂಗಳ 16 ರಂದು ಬಜೆಟ್ ಅಧಿವೇಶನವಿದ್ದು, ಆ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ತಕ್ಷಣ ಹಣ ಮಂಜೂರಾಗಬೇಕು, ಹಾಗೂ ನಮ್ಮ ಭಾಗದಲ್ಲಿ ಮೆಡಿಕಲ್ ಕಾಲೇಜು ಕೂಡ ಆಗಬೇಕು, ಎಲ್ಲಿ ಮೆಡಿಕಲ್ ಇರೋದಿಲ್ಲವೋ ಅಲ್ಲಿ ಆಸ್ಪತ್ರೆ ನಡೆಸುವುದು ತುಂಬ ಕಷ್ಟ. ಘಟ್ಟದ ಮೇಲೊಂದು, ಘಟ್ಟದ ಕೆಳಗೊಂದು ಆಸ್ಪತ್ರೆಬೇಕು, ನಮ್ಮ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಸಮಸ್ಯೆ ಇದ್ದು, ಯಾವುದೇ ಕೈಗಾರಿಕೆ ಇಲ್ಲ, ಜಿಲ್ಲೆಯ ಯುವಕರು ಬೇರೆ ರಾಜ್ಯಗಳಿಗೆ ಹೋಗಿ ಉದ್ಯೋಗ ಮಾಡುವ ಸ್ಥಿತಿಯಿದೆ. ಇಲ್ಲಿರುವ ಅಪ್ಪ ಅಮ್ಮಗೆ ಅನಾರೋಗ್ಯವಾದರೆ ಚಿಕಿತ್ಸೆ ಪಡೆಯಲು ಸರಿಯಾದ ಆಸ್ಪತ್ರೆ ಇಲ್ಲ. ಕಾಯಿಲೆ ಬಂದರೂ ಕೂಡ ಮಂಗಳೂರಿಗೆ ಹೋಗವ ಪರಿಸ್ಥಿತಿ ಇದೆ ಎಂದರು.
ಇವರ ಹೋರಾಟಕ್ಕೆ ಭಟ್ಕಳ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಬೆಂಬಲ ವ್ಯಕ್ತಪಡಿದೆ.