ದಿನಾಂಕ : 30/01/2024 ಬೆಳಿಗ್ಗೆ 10.00 ಗಂಟೆಗೆ ಆರ್. ಎನ್. ಎಸ್
ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ಹುತಾತ್ಮರ
ದಿನಾಂಚರಣೆ ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್. ಎನ್. ಎಸ್ ಸಮೂಹ ಶಿಕ್ಷಣ
ಸಂಸ್ಥೆಯ ಆಡಳಿತಾಧಿಕಾರಿಗಳಾದ ದಿನೇಶ ಗಾವಂಕರ್ ರವರು ಮಾತನಾಡಿ ವಿದ್ಯಾರ್ಥಿಗಳು
ಗಾಂಧಿಜಿಯವರ ಆದರ್ಶ, ಜೀವನ ಸತ್ಯತೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ
ಬದುಕು ಬಂಗಾರವಾಗುವುದು, ರಾಮ ಮತ್ತು ರಾಮರಾಜ್ಯದ ಕಲ್ಪನೆಯನ್ನು ಮೂಡಿಸಿದರು.
.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕದ ಸಂಯೋಜನಾಧಿಕಾರಿಗಳಾದ
ಗಣಪತಿ ಕಾಯ್ಕಿಣಿ ಮಾತನಾಡಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ಹುತಾತ್ಮರ ತ್ಯಾಗ
ಬಲಿದಾನದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೋ.
ಹರಿಕೃಷ್ಣ ಹಾಗೂ ಪ್ರೋ. ವಿನೋದ ಗೌಡ ಬೆಂಗಳೂರು ಮತ್ತು ಗಣಕಯಂತ್ರ ವಿಭಾಗದ
ಮುಖ್ಯಸ್ಥರಾದ ಗಣೇಶ ನಾಯ್ಕ ,ಉಪನ್ಯಾಸಕಿ ಉಷಾ ನಾಯ್ಕ ಹಾಜರಿದ್ದರು. ಮಡಿದ
ಹುತಾತ್ಮರಿಗೆ ಒಂದು ನಿಮಿಷಗಳ ಕಾಲ ಮೌನವನ್ನು ಅರ್ಪಿಸಿ ಶಾಂತಿ ಕೋರಿದರು.
ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಹುತಾತ್ಮರ
