ಸಚಿವರ ಪ್ರಥಮ ಜನಸ್ಪಂಧ ಸಭೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ

Share

ಭಟ್ಕಳ: ಭಾರಿ ಅಂತರದ ಗೆಲುವಿನಿಂದ ಎರಡನೇ ಭಾರಿ ವಿಧಾನಸಭೆಗೆ ಕಾಲಿಟ್ಟ ಮಂಕಾಳು ವೈದ್ಯರು ಸಚಿವರಾದ ನಂತರ ಭಟ್ಕಳದಲ್ಲಿ ಯಾವುದೇ ಸಭೆ ಅಥವ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂಬ ಆರೋಪ ಮತ್ತು ಆಕ್ರೋಶ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಜನಸ್ಪಂದನ ಸಭೆ ಮಾಡುವುದರ ಮೂಲಕ ಇದಕ್ಕೆ ಮುಕ್ತಿ ಸಿಕ್ಕಿದೆ. ಜ.೩೦ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ಧಿವಿನಾಯಕ ಸಭಾಭವನ ತೆಂಗಾರದಲ್ಲಿ
ಜನಸ್ಪಂದನ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು

“ಜನ ಸ್ಪಂದನ ಸಭೆ” “ಜನರ ಬಳಿಗೆ ಮಂಕಾಳ ವೈದ್ಯರ ನಡಿಗೆ” ಚುನಾವಣೆ ಪೂರ್ವದಲ್ಲಿ ಕ್ಷೇತ್ರದ ಪ್ರತಿ ಭೂತ್’ಗಳಿಗೆ ಭೇಟಿಕೊಟ್ಟಾಗ ಜನ ಅಭೂತ ಪೂರ್ವ ಬೆಂಬಲ ನೀಡಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವನ್ನು ತಂದು ಕೊಟ್ಟಿದ್ದೀರಿ ಇದಕ್ಕೆ ನಾನು ಸದಾ ಚಿರಋಣಿ. ಅದರಂತೆ ನಿಮಗೆ ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ಗೆದ್ದು ಬಂದ ಮೇಲೆ ಪ್ರತಿ ಭೂತ್ ಮಟ್ಟದಲ್ಲಿ ನಾನು ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ ನಿಮ್ಮ ಕಷ್ಟಗಳಿಗೆ ನೆರವಾಗುತ್ತೆನೆ. ಅಂದು ಕೊಟ್ಟ ಮಾತಿನಂತೆ ಇಂದಿನಿಂದ “ಜನ ಸ್ಪಂದನ ಸಭೆ” ಕಾರ್ಯಕ್ರಮನ್ನು ನನ್ನ ಹುಟ್ಟಿದ ಊರಾದ ಬೈಲೂರು ಗ್ರಾಮದಿಂದ ಮೊದಲೆನೆಯದಾಗಿ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ.

ಈ ಕಾರ್ಯಕ್ರಮ ಕೇವಲ ಕ್ಷೇತ್ರಕ್ಕೆ ಮಾತ್ರವಲ್ಲದೆ ಕೆಲವೇ ದಿನಗಳಲ್ಲಿ ಜಿಲ್ಲೆಯ ಪ್ರತಿ ಪಂಚಾಯತ್ ಮಟ್ಟದಲ್ಲಿ “ಜನ ಸ್ಪಂದನ ಸಭೆ” ನಡೆಸುವ ಉದ್ದೇಶವಿದ್ದು ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ ಇದ್ದು ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದು, ಜಿಲ್ಲೆಯಲ್ಲಿ ಪ್ರತಿ ಮನೆಗಳಿಗೂ ವಿದ್ಯುತ್ ಸಂಪರ್ಕ ಸೇವೆ ನೀಡುವುದು, ಪ್ರತಿ ಊರುಗಳಿಗೂ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಂಪರ್ಕ ಸೇವೆ ಒದಗಿಸಿ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಜಿಲ್ಲೆಯ ಪ್ರತಿ ಜನರ ಸಮಸ್ಯೆಗಳಿಗೆ,ಕಷ್ಟಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುವುದೇ ನನ್ನ ಗುರಿಯಾಗಿರುತ್ತದೆ ಎಂದು ಹೇಳಿದರು.

ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಸಮ್ಯಸೆಗಳಿಗೆ ಸ್ಥಳದಲ್ಲೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಂದುವೇಳೆ ವಿಳಂಬವಾದಲ್ಲಿ ನಿಮ್ಮ ಮೇಲೆ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಚಿವರ ಜನಸ್ಪಂದನ ಸಭೆಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!