ತುರುವೇಕೆರೆ: ತಾಲೂಕಿನ ಕೊಡುಗೆಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಲ್ಕೆರೆ ಸದಸ್ಯ ಗಂಗಾಮಣಿ ಅವಿರೋಧ ಆಯ್ಕೆಯಾಗಿದ್ದಾರೆ.
ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವಿರೋಧವಾಗಿ ಇವರು ಆಯ್ಕೆಗೊಂಡಿದ್ದು, ಹದಿನಾರು ಸದಸ್ಯರಿರುವ ಪಂಚಾಯತಿಯಲ್ಲಿ, ಹಿಂದಿನ ಅಧ್ಯಕ್ಷರಾದ ರೂಪ ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸೇವಂತಿ ಗಂಗಾಮಣಿ ಅವರನ್ನು ಹೊರತುಪಡಿಸಿ ಯಾವುದೇ ನಾಮಪತ್ರಗಳು ಸಲ್ಲಿಸದ ಕಾರಣ, ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ವೈಯಂ ರೇಣು ಕುಮಾರ್ ಅವರು ಘೋಷಣೆ ಮಾಡಿದರು.
ಘೋಷಣೆ ಆಗುತ್ತಿದ್ದಂತೆ, ನೂತನ ಅಧ್ಯಕ್ಷರರಿಗೆ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಸಿ.ಎಸ್. ಮೂರ್ತಿ ನೆಮ್ಮದಿ ಗ್ರಾಮ ಇವರು ಅಧ್ಯಕ್ಷರನ್ನು ಅಭಿನಂದಿಸಿದರು. ಹಾಗೂ ಅಧ್ಯಕ್ಷರ ಬೆಂಬಲಿಗರು ಮತ್ತು ಹಿತೈಷಿಗಳು ಪಟಾಕಿ ಸಿಡಿಸಿ ಸಿಹಿ ಸಂಭ್ರಮಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜ್ಯಲಕ್ಷ್ಮಿ ಸಿ.ಪಿ., ಪಿಡಿಒ ಗೋಪಿನಾಥ್ . ಕಾಂಗ್ರೆಸ್ ಮುಖಂಡರಾದ ಕಲ್ಕೆರೆ ರಾಘು, ದಿನೇಶ್, ರಮೇಶ್, ದೇವರಾಜ್, ಕಿರಣ್ ಕುಮಾರ್, ಬಾಬು ಕುನ್ನ, ರಂಗನಾಥ್ ಬಿಲ್ ಕಲೆಕ್ಟರ್ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಕಲ್ಕೆರೆ ಗ್ರಾಮಸ್ಥರುಗಳು ಇದ್ದರು.
