ರಾಷ್ಟ್ರದ ಹೆಮ್ಮೆಯ ಹಾಗೂ 500 ಶತಮಾನಗಳ ಸಾವಿರಾರು ಬಲಿದಾನಗಳ ಪ್ರತಿಫಲದಿಂದ ಪ್ರತಿಷ್ಠಾಪನೆಗೊಳ್ಳುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರ ಬೃಹದಕಾರವಾಗಿ ಮತ್ತು ಕೋಟ್ಯಾಂತರ ರಾಮಭಕ್ತರ ಆಸೆಯಂತೆ ಅದ್ದೂರಿಯಿಂದ ಜರುಗುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಎಂ ಎಸ್ ಹರೀಶ್ ರವರ ಅಭಿಪ್ರಾಯ ಹಾಗೂ ನನ್ನದೊಂದು ಮನವಿ.
ಕರ್ನಾಟಕದ ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಮತ್ತು ತಂಡ ಶ್ರೀ ರಾಮನ ಪ್ರತಿಷ್ಠಾಪನೆಯಲ್ಲಿ ಅವರ ಕೆತ್ತಿದಂತಹ ವಿಗ್ರಹ ರಾಮ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಫೈನಲ್ ಆಗಿರುವುದು ನಮ್ಮ ಕರ್ನಾಟಕದ ಹೆಮ್ಮೆಯ ವಿಚಾರ.
ರಾಷ್ಟ್ರೀಯ ಹಿಂದೂ ಪರಿಷತ್ತಿನಿಂದ ನಮ್ಮದೊಂದು ಮನವಿ ಇಡೀ ಕುಟುಂಬವನ್ನು ಪ್ರತಿಷ್ಠಾಪನೆಯ ದಿನ ಆಹ್ವಾನ ನೀಡಬೇಕು. ಹಾಗ ವಿಶೇಷವಾಗಿ ಅರುಣ್ ಯೋಗಿರಾಜ್ ರವರಿಗೆ ಅಂದು ವಿಶೇಷವಾಗಿ ಸನ್ಮಾನ ಆಗಬೇಕು ಎನ್ನುವುದು. ರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಸ್ ಹರೀಶ್ ರವರ ಆಗ್ರಹ ಜೊತೆಗೆ ನಮ್ಮ ಕರ್ನಾಟಕದ ಅರುಣ್ ಯೋಗಿರಾಜ್ ರವರ ಸಂಪೂರ್ಣ ವಿವರ ಮತ್ತು ಅವರ ಫೋಟೋವನ್ನು ಗರ್ಭಗುಡಿಯಲ್ಲಿರುವ ಮೂಲ ರಾಮ ವಿಗ್ರಹದ ಕೆತ್ತನೆಯ ಮಹಾನ್ ಶಿಲ್ಪಿ ಎಂದು ಇಡೀ ರಾಮ ಮಂದಿರದ ಎಲ್ಲಾದರೂ ಒಂದು ಕಡೆ ಅವರ ಫೋಟೋ ಸಮೇತ ಕಲ್ಲಿನ ಕೆತ್ತನೆಯಲ್ಲಿ ಹಲವಾರು ಶತಮಾನಗಳು ನಮ್ಮ ಕರ್ನಾಟಕದ ಮಹಾನ್ ಶಿಲ್ಪಿಯ ಹೆಸರು ಉಳಿಯುವಂತೆ ಮಾಡಬೇಕು. ಎನ್ನುವುದು ರಾಷ್ಟ್ರೀಯ ಹಿಂದೂ ಪರಿಷತ್ತಿನ ಆಗ್ರಹ.
ಇದಕ್ಕೆ ಕರ್ನಾಟಕದ ಎಲ್ಲಾ ಕನ್ನಡ ಸಂಘಟನೆಗಳು ಮತ್ತು ಹಿಂದೂ ಸಂಘಟನೆಗಳು ಹಾಗೂ ಮಠಾಧೀಶರುಗಳು ಎಲ್ಲರೂ ನಿಮ್ಮ ಹೇಳಿಕೆಗಳ ಮುಖಾಂತರ ಕೈಜೋಡಿಸಬೇಕು ಎನ್ನುವುದು ನಮ್ಮ ಆಗ್ರಹ ಮತ್ತು ಮನವಿ. ಇದಕ್ಕೆ ನಮ್ಮ ಕರ್ನಾಟಕದ ಶ್ರೀರಾಮ ಪ್ರತಿಷ್ಠಾಪನ ಟ್ರಸ್ಟ್ ನಲ್ಲಿ ಒಬ್ಬರಾಗಿರುವಂತಹ
ಶ್ರೀ ಶ್ರೀ ಪೇಜಾವರ ಮಠದ ಸ್ವಾಮೀಜಿಗಳು ಮುಖ್ಯ ಪಾತ್ರ ವಹಿಸಬೇಕು. ಎನ್ನುವುದು ರಾಷ್ಟ್ರ ಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಸ್ ಹರೀಶ್ ರವರಿಂದ ಮಾನವಿ ಪೂರ್ವಕ ಆಗ್ರಹ ಇದಕ್ಕೆ ಇಡೀ ರಾಜ್ಯದ್ಯಂತ ಮತ್ತು ದೇಶಾದ್ಯಂತ ಎಲ್ಲರೂ ಒಮ್ಮತದ ಅಭಿಪ್ರಾಯ ಕೊಡಬೇಕು ಎನ್ನುವುದು ರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಸ್ ಹರೀಶ್ ರವರ ಕಳೆಕಳಿಯ ಮನವಿ.
