ಆಯುರ್ವೇದ ವರ್ಲ್ಡ್ ಸಂಹಿತ್ ಕಲ್ಚರಲ್ ಕಾಂಪಿಟೇಶನ್” ನಲ್ಲಿ ಪ್ರಥಮ ಸ್ಥಾನ ಗೆದ್ದ ಉಡುಪಿಯ MIAMS ಕಾಲೇಜು.

Share

ಆಯುರ್ವೇದ ವರ್ಲ್ಡ್ ಸಂಹಿತ್ ಕಲ್ಚರಲ್ ಕಾಂಪಿಟೇಶನ್” ನಲ್ಲಿ ಪ್ರಥಮ ಸ್ಥಾನ ಗೆದ್ದ ಉಡುಪಿಯ MIAMS ಕಾಲೇಜು.

ಉಡುಪಿ : “ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್” ಮತ್ತು “ಹಿಮಾಲಯ ವೆಲ್ನೆಸ್” ರವರ ಸಹ ಪ್ರಾಯೋಜಕತ್ವದಲ್ಲಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ, “ಆಯುರ್ವೇದ ವರ್ಲ್ಡ್ ಸಂಹಿತ್ ಕಲ್ಚರಲ್ ಕಾಂಪಿಟೇಶನ್” ನಲ್ಲಿ ಅತ್ಯದ್ಭುತ ಗೀತ ನಾಟಕವನ್ನು ಪ್ರದರ್ಶಿಸಿ, ಉಡುಪಿಯ “ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್” ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಸತತವಾಗಿ ನಾಲ್ಕು ದಿನಗಳ ನಡೆದ ಈ ಸ್ಪರ್ಧೆಗೆ 26 ಕಾಲೇಜುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

‘ಸಮುದ್ರ ಮಂಥನ’ದ ಥೀಮ್ ನ್ನು ಆಧಾರವಾಗಿಟ್ಟುಕೊಂಡು, ಪ್ರಕೃತಿಯೊಂದಿಗೆ ನಮ್ಮ ಆರೋಗ್ಯವು ಯಾವ ರೀತಿ ಅವಲಂಬಿಸಿದೆ ಮತ್ತು ದೇಹವು ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂಬುದನ್ನು; ಸಂಸ್ಕೃತ ಮತ್ತು ಕನ್ನಡದಲ್ಲಿ, ಹಿಂದುಸ್ತಾನಿ ಸಂಗೀತ, ಕರ್ನಾಟಿಕ್ ಸಂಗೀತ ಮತ್ತು ಯಕ್ಷಗಾನದ ಕಲೆಗಳನ್ನು ಸಂಹಿತಗೊಳಿಸಿ ಅತ್ಯದ್ಭುತವಾದ ಪ್ರದರ್ಶನವನ್ನು ನೀಡಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಬಹುಮಾನದ ಮೊತ್ತ 3ಲಕ್ಷ ರೂ. ಚೆಕ್ಕನ್ನು ಅದೇ ವೇದಿಕೆಯಲ್ಲಿ ತಂಡಕ್ಕೆ ನೀಡಿ, ಡಾ.ಗಿರಿಧರ್ ಕಜೆಯವರು ತಂಡವನ್ನು ಅಭಿನಂದಿಸಿದರು. ಹಾಗೂ ತಂಡದ ಈ ಸಾಧನೆಗೆ MIAMS ಅಧ್ಯಾಪಕ ವೃಂದ ಮತ್ತು ಆಡಳಿತ ವೃಂದ ವಿದ್ಯಾರ್ಥಿಗಳ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!