
ಭಟ್ಕಳ : ಭಟ್ಕಳದ ಪ್ರತಿಷ್ಠಿತ ಐ.ಸಿ.ಎಸ್.ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸ್ನೇಹ
ಸಮ್ಮೇಳನವು ದಿನಾಂಕ ೨೦/೧೨/೨೦೨೫ ಶನಿವಾರ ಮತ್ತು ೨೨/೧೨/೨೦೨೫ ಸೋಮವಾರದಂದು ಯಶಸ್ವಿಯಾಗಿ ಜರುಗಿತು. ಶನಿವಾರ ನಡೆದ ಪೂರ್ವಪ್ರಾಥಮಿಕ ಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ,
ಶ್ರೀ.ಕರುಣಾನಿಧಿ ಕೆ ಮಾತನಾಡಿ ವಿದ್ಯಾಂಜಲಿ ಶಾಲೆಯು ಆಧುನಿಕ ತಂತ್ರಜ್ಞಾನಾಧಾರಿತ ಪಠ್ಯಕ್ರಮವನ್ನು
ಮಕ್ಕಳಿಗೆ ಭೋಧಿಸುತ್ತಿದ್ದು, ಮಕ್ಕಳು ಹಾಗೂ ಪಾಲಕರು ಇದರ ಸದುಪಯೋಗ ಪಡೆಯಬೇಕೆಂದು
ಕರೆ ನೀಡಿದರು.

ಸೋಮವಾರ ನಡೆದ ಪ್ರಾಥಮಿಕ ಹಾಗೂ ಫ್ರೌಢಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ
ಆಗಮಿಸಿದ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಯ ಹೆಸರಾಂತ ನವಜಾತ ಶಿಶು ತಜ್ಙ ಡಾ.ಲೆಸ್ಲಿ ಎಡವರ್ಡ ಲಿವಿಸ್ ಮಾತನಾಡಿ ಪಾಲಕರು ಹಾಗೂ ಶಿಕ್ಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹು ಮುಖ್ಯ ಪಾತ್ರ
ವಹಿಸುತ್ತದೆ ಎಂದು ಅರಿವು ಮೂಡಿಸಿದರು.ಭಟ್ಕಳ ಎಜ್ಯುಕೇಶನ ಟ್ರಸ್ಟನ ಚ್ಯೇರಮನ್ ಡಾ.ಸುರೇಶ
ನಾಯಕ ಇವರು ಶಾಲೆಯ ಶಿಕ್ಷಕರ ಮತ್ತು ಪೋಷಕರ ಪರಿಶ್ರಮವನ್ನು ಶ್ಲಾಘಿಸಿದರು.

ಇದೇ ಸಂಧರ್ಬದಲ್ಲಿ ಮಾತನಾಡಿದ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಭಟ್ಕಳ ಎಜ್ಯಕೇಷನ್ ಟ್ರಸ್ಟ್ ನ ಭವಿಷ್ಯದ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು ಹಾಗೂ ಪಾಲಕರು ಶಾಲೆಯ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನು ಕೊಂಡಾಡಿದರು.ಪ್ರಾoಶುಪಾಲರಾದ ಶ್ರೀ ರಾಘವೇಂದ್ರ ಕಾಮತ ಇವರು ಶಾಲೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೂರೆಗೊಳಿಸಿತು ಹಾಗೂ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
