ಭಟ್ಕಳ- ಶಿರಸಿ ಸಹಾಯಕ ಆಯುಕ್ತೆ ಕಾವ್ಯ ರಾಣಿ ಹುಣಸೂರುಗೆ ವರ್ಗಾವಣೆ

Share

ಭಟ್ಕಳ- ಶಿರಸಿ ಸಹಾಯಕ ಆಯುಕ್ತೆ ಕಾವ್ಯ ರಾಣಿ ಹುಣಸೂರುಗೆ ವರ್ಗಾವಣೆ

ಭಟ್ಕಳ :ಸಿರಸಿ ಸಹಾಯಕ ಆಯುಕ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವ್ಯ ರಾಣಿಯವರು ಭಟ್ಕಳ ಉಪ ವಿಭಾಗಾಧಿಕಾರಿಯಾಗಿ ಪ್ರಭಾರಿ ಯಾಗಿ ಹೆಚ್ಚುವರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರಕಾರವು ಈಗ ಹೊಸ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು ಮೈಸೂರಿನ ಹುಣಸೂರು ತಾಲೂಕಿಗೆ ಸಹಾಯಕ ಆಯುಕ್ತೆಯಾಗಿ ವರ್ಗಾವಣೆ ಮಾಡಲಾಗಿದೆ.

ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಕಾವ್ಯರಾಣಿಯವರು 2019ರಲ್ಲಿ ಕೆಎಎಸ್ ಬರೆದು ಸರಕಾರಿ ಸೇವೆಯನ್ನು ಪ್ರಾರಂಭಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ವೀರೇಶ್ ನಾಯಕ್ ಅವರ ಪುತ್ರಿಯಾಗಿರುವ ಇವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ಭಾಷಣಗಳನ್ನು ಮಾಡುತ್ತಿದ್ದರು.ಆಡಳಿತದಲ್ಲಿ ಶಿಸ್ತು ಬದ್ಧ ಕ್ರಮ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಿ ಎಂದು ರಾಜ್ಯದಲ್ಲಿ ಹೆಸರು ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!