ಭಟ್ಕಳ: ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ ಆರೋಪಿಗಳು ಅಂದರ್.
180 ಕ್ಕೂ ಹೆಚ್ಚು ಗ್ರಾಹಕರಿಗೆ ವಂಚನೆ ಮಾಡಿದ ಆರೋಪದಡಿ ಹಾಗೂ ಭಟ್ಕಳದ ಮಹ್ಮದ್ ಸವೂದ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಶಹರ ಠಾಣೆ ಪೊಲೀಸರು ಭಟ್ಕಳ ನಗರದಲ್ಲಿ ಗ್ಲೋಬಲ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಮಳಿಗೆ ತೆರೆದು 10% ರಿಂದ 40 % ಡಿಸ್ಕೋಂಟ್ ನೀಡುವುದಾಗಿ ಹೇಳಿ 300 ಜನರಿಂದ 20 ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಮತ್ತು ತಮಿಳುನಾಡು ಮೂಲದ ಎಂ ಗಣೇಶನ್, ತ್ಯಾಗರಾಜನ್ ಮತ್ತು ಮೈಯನಾದನ್ ಎಂದು ಗುರುತಿಸಲಾಗಿದೆ.

ಭಟ್ಕಳ ಸಿಪಿಐ ದಿವಾಕರ್ .ಪಿ.ಎನ್ ನೇತ್ರತ್ವದಲ್ಲಿ ಪಿ.ಎಸ್.ಐ ನವೀನ್ ನಾಯ್ಕ ಮತ್ತು ತಿಮ್ಮಪ್ಪ ಎಸ್, ಸಿಬ್ಬಂದಿಗಳಾದ ದೀಪಕ್ ನಾಯ್ಕ್, ಸುರೇಶ್ ಮರಾಠಿ, ವಿನಾಯಕ್ ಪಾಟೀಲ್, ದೇವು ನಾಯ್ಕ, ಕಿರಣ್ ಪಾಟೀಲ್, ಸಚಿನ್ ಪವಾರ್, ರೇವಣಸಿದ್ದಪ್ಪ ಮಾಗಿ, ಕಾಶಿನಾಥ್ ಕೊಟ್ಟಗೋಣಸಿ, ಮಹಾಂತೇಶ ಹಿರೇಮಠ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು ಘಟನೆ ನಡೆದು ಒಂದು ವಾರದೊಳೆಗೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
