ಭಟ್ಕಳದ ಬಿ. ವಿ ರಾಹುಲ್ ರಾಜ್ಯಮಟ್ಟದ ಕರಾಟೆಯಲ್ಲಿ ಸತತ ಮೂರನೇ ಬಾರಿಗೆ “ಕರ್ನಾಟಕ ಸ್ಟೇಟ್ ಲೆವಲ್ ಚಾಂಪಿಯನ್ಷಿಪ್ ವಿನ್ನರ್”

Share

2025 -26 ನೇ ಸಾಲಿನ 17 ವರ್ಷದೊಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ ಎಂವಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ 9- 11- 2025 ಮತ್ತು 10- 11- 2025 ರವರೆಗೆ ನಡೆದ ಪ್ರೌಢಶಾಲಾ ಮಕ್ಕಳ ಕರ್ನಾಟಕ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ಬಿ ವಿ ರಾಹುಲ್ ಸತತ ಮೂರನೇ ಬಾರಿ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಆಗಿದ್ದಾರೆ. ನಾಗಪ್ಪ ನಾಯ್ಕ ರೋಡ್ ನ ನಿವಾಸಿಗಳಾದ ಶ್ರೀ ವಿನಾಯಕ ನಾಯ್ಕ ಹಾಗೂ ಕಮಲಾ ನಾಯ್ಕ ದಂಪತಿಗಳ ಸುಪುತ್ರನಾದ ಬಿ. ವಿ. ರಾಹುಲ್ ಸತತ ಮೂರನೇ ಬಾರಿಗೆ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಆಗುವ ಮೂಲಕ ಮುಂಬರುವ ರಾಷ್ಟ್ರೀಯ ಮಟ್ಟದ ಪ್ರೌಢಶಾಲಾ ಮಕ್ಕಳ ಕರಾಟೆ ಪಂದ್ಯಾವಳಿಯಲ್ಲಿ ರಾಜ್ಯದ ಕರಾಟೆ ಪಟುವಾಗಿ ಪ್ರತಿನಿಧಿಸಲಿದ್ದಾರೆ.

ಇವರ ಈ ಸಾಧನೆಯು ಭಟ್ಕಳಕ್ಕೆ ಹೆಮ್ಮೆಯ ವಿಷಯವಾಗಿದ್ದು, ಇವರ ಸಾಧನೆಗೆ ತುಂಬು ಹೃದಯದ ಅಭಿನಂದನೆಗಳು. ರಾಷ್ಟ್ರೀಯ ಮಟ್ಟದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಶುಭಕೊರೋಣ.

Leave a Reply

Your email address will not be published. Required fields are marked *

error: Content is protected !!