
ಜಗತ್ತಿನಲ್ಲಿ ಎಲ್ಲಿಯವರೆಗೆ ಮೂರ್ಖರು ಇರುತ್ತಾರೊ ಅಲ್ಲಿಯವರೆಗೆ ಮೂರ್ಖರನ್ನಾಗಿಸುವವರು ಇರುತ್ತಾರೆ ಈ ಮಾತು ಭಟ್ಕಳದ ಜನತೆಗೆ ಅಕ್ಷರಸಹ ಸತ್ಯವೆನಿಸುತ್ತಿದೆ.

ಒಂದು ತಿಂಗಳ ಹಿಂದಷ್ಟೇ ಭಟ್ಕಳ ಪುರಸಭೆ ವ್ಯಾಪ್ತಿಯ ಕಾರ್ ಸ್ಟ್ರೀಟ್ ಪ್ರದೇಶದ ಕಟ್ಟಡ ಒಂದರಲ್ಲಿ “ಗ್ಲೋಬಲ್ ಇಂಟರ್ನ್ಯಾಷನಲ್” ಎಂಬ ಹೆಸರಿನಲ್ಲಿ ಮಳಿಗೆ ಒಂದನ್ನ ಆರಂಭಿಸಿ ಮನೆ ಬಳಕೆಯ ವಸ್ತುಗಳನ್ನ ಅರ್ಧ ಬೆಲೆಗೆ ನೀಡುತ್ತೇವೆ ಎಂದು ಜನರನ್ನು ನಂಬಿಸಿ ಪ್ರಚಾರವನ್ನು ಮಾಡಿದ ತಮಿಳುನಾಡು ಮೂಲದ ಉದಯಕುಮಾರ್ ಹಾಗೂ ಅವರ ತಂಡವು ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಮುಂಗಡ ಹಣ ಪಡೆದು ವಸ್ತುಗಳನ್ನ ನೀಡದೆ ಪಂಗನಾಮ ಹಾಕಿದ್ದಾರೆ. ವಸ್ತುಗಳ ನಿಗದಿತ ಬೆಲೆಯ ಅರ್ಧ ಹಣವನ್ನು ಜನರಿಂದ ಮುಂಗಡವಾಗಿ ಪಡೆದು ರಸೀದಿಯನ್ನು ನೀಡಿ ಎರಡು ವಾರದ ನಂತರ ನೀವು ಬುಕ್ ಮಾಡಿದ ವಸ್ತುಗಳನ್ನ ನೀಡುತ್ತೇವೆ ಎಂದು ಹೇಳಿ ಕೆಲವರಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ಹಾಗೂ ಸೋಫಾ ಸೆಟ್ ಗಳನ್ನ ನೀಡಿ ಜನರಿಗೆ ಆಸೆ ತೋರಿಸಿ ಕೋಟ್ಯಾಂತರ ರೂಪಾಯಿಗಳನ್ನ ವಂಚಿಸಿದ್ದಾರೆ. ಇಂತಹ ಪ್ರಕರಣಗಳು ಭಟ್ಕಳದಲ್ಲಿ ಹೊಸದೇನಲ್ಲ ಇಂಥದ್ದೇ ಪ್ರಕರಣವು 1991- 92 ರಲ್ಲಿ ಕಾಮಾಕ್ಷಿ ಪೆಟ್ರೋಲ್ ಬಂಕ್ ಪಕ್ಕದ ಕಟ್ಟಡದ ಒಂದರಲ್ಲಿ ನಡೆದಿತ್ತು. ಈಗ ಮತ್ತೆ ಈ ಪ್ರಕರಣದಿಂದ ಹಳೆಯ ಪ್ರಕರಣವು ನೆನಪಿಗೆ ಬರುತ್ತಿದೆ. ಭಟ್ಕಳದ ಜನರು ಈಗಲಾದರೂ ಬುದ್ಧಿ ಕಲಿತು ವಂಚನೆಗೆ ಒಳಗಾಗದಿರಿ ಎನ್ನುವುದೇ v2ನಮ್ಮ ಟಿವಿಯ ಕಳಕಳಿ.
