ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಹಾನಿ ಉಂಟುಮಾಡುವ ಯೋಜನೆಗಳನ್ನ ಕೈಬಿಡಬೇಕೆಂದು ಕಾಗೇರಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

Share

ಹಲವಾರು ತಿಂಗಳುಗಳಿಂದ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರು ಸರಕಾರದ ಹಲವಾರು ಯೋಜನೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಇವುಗಳನ್ನು ಗಮನಿಸಿದ ಉತ್ತರ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರು, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರನ್ನು ಭೇಟಿಮಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕವನ್ನು ಸೃಷ್ಟಿಸಿರುವ ಬೇಡ್ತಿ ವರದಾ , ಅಘನಾಸಿನಿ- ವೇದಾವತಿ ನದಿತಿರುವು ಯೋಜನೆಗಳು ಹಾಗೂ ಶರಾವತಿ ಪಂಪ ಸ್ಟೋರೇಜ್ ಯೋಜನೆಗಳನ್ನು ನಿಲಿಸಬೇಕೆಂದು ಇದರ ಜೊತೆಗೆ ಈ ಯೋಜನೆಗಳ ಕುರಿತು ವಿಜ್ಞಾನಿಗಳ ಸಭೆ ನಡೆಸಬೇಕು ಮತ್ತು ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಬೇಕೆಂದು ಸಹ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ್ , ಶಾಸಕರಾದ ಶ್ರೀ ಶಿವರಾಮ್ ಹೆಬ್ಬಾರ್ , ವಿಧಾನ ಪರಿಸತ್ ಸದಸ್ಯರಾದ ಶ್ರೀ ಶಾಂತರಾಮ ಸಿದ್ದಿ ಹಾಗೂ ಪ್ರಮುಖರು ಮತ್ತು ಪರಿಸರ ಹೊರಟಗಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!