ಹೊಟ್ಟೆಪಾಡಿಗಾಗಿ ನೆರೆಯ ರಾಜ್ಯವಾದ ಗೋವಾಗೆ ಕೆಲಸಕ್ಕೆ ಹೋಗಿದ್ದ ಕಾಸರಗೋಡು ಪಂಚಾಯತ ವ್ಯಾಪ್ತಿಯ ನಿವಾಸಿ ಕೃಷ್ಣ ಗಣಪಯ್ಯ ಗೌಡ ಇವರು ಗೋವಾದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರು. ಇವರ ಮನೆಗೆ ಇಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯ ಇವರು ಭೇಟಿ ನೀಡಿ, ಕುಟುಂಬಕ್ಕೆ ಆಶ್ರಯವಾಗಿದ್ದ ಪತಿಯ ಅಗಲಿಕೆಯಿಂದ ದುಃಖದಲ್ಲಿದ್ದ ಪತ್ನಿಗೆ ಹಾಗೂ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

ಮೃತ ಕೃಷ್ಣ ಗೌಡ ಅವರ ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಉಲ್ಲಾಸ್ ಶಾನ್ಭಾಗ್
