ಇಂದು ಬಿಜೆಪಿ ಭಟ್ಕಳ ಮಂಡಲದ ಆತ್ಮ ನಿರ್ಭರ ಭಾರತ ಅಭಿಯಾನದ ಕಾರ್ಯಾಗಾರವು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಮಾಜಿ ಶಾಸಕರಾದ ಸುನೀಲ್ ನಾಯ್ಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನಾವು ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗನ್ನು ಬಳಸಿ ಸ್ಥಳೀಯ ಕೈಗಾರಿಕೆ ಹಾಗೂ ಉದ್ಯಮವನ್ನು ಬೆಳೆಸಿದಾಗ ಮಾತ್ರ ಆತ್ಮ ನಿರ್ಭರ ಭಾರತದ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.
ನಿಗಮ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಗೋವಿಂದ ನಾಯ್ಕ ಮಾತನಾಡಿ ಸ್ವದೇಶಿ ವಸ್ತು ಬಳಕೆಯ ಸಂಕಲ್ಪದೊಂದಿಗೆ, ವೋಕಲ್ ಫಾರ್ ಲೋಕಲ್ ಪೂರಕವಾಗಿ ‘ಆತ್ಮನಿರ್ಭರ ಭಾರತ ಅಭಿಯಾನ’ವನ್ನು ಮುಂದಿನ ಮೂರು ತಿಂಗಳು ಹಮ್ಮಿಕೊಳ್ಳೋಣ ಎಂದರು ಹಾಗೂ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಂಡಲಾಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯ್ಕರವರು ಮಾತನಾಡಿ ಅಭಿಯಾನದಲ್ಲಿ 3 ತಿಂಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.
ಜಿಲ್ಲಾ ಕಾರ್ಯದರ್ಶಿಯವರಾದ ಸುಬ್ರಾಯ ದೇವಾಡಿಗ ಪ್ರಸ್ತಾವಿಕವಾಗಿ ಮಾತನಾಡಿದರು .
ಕಾರ್ಯಕ್ರಮವನ್ನು ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು ಹಾಗೂ ಮಂಡಲದ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲದ ಸಂಚಾಲಕರಾದ ಶ್ರೀಧರ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ,ಮಂಡಲದ ಉಪಾಧ್ಯಕ್ಷರಾದ ಸಂತೋಷಿ ಖಾರ್ವಿ, ಒಬಿಸಿ ಮೋರ್ಚಾ ಅಧ್ಯಕ್ಷರಾದ ಉಮೇಶ ನಾಯ್ಕ,ಯುವ ಮೋರ್ಚಾ ಅಧ್ಯಕ್ಷರಾದ ಸುನೀಲ್ ಕಾಮತ,ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿವೇಕ ನಾಯ್ಕ, ವೆಂಕಟೇಶ್ ನಾಯ್ಕ ,ಸಾಮಾಜಿಕ ಜಾಲತಾಣದ ತಾಲೂಕ ಸಂಚಾಲಕರಾದ ಪಾಂಡುರಂಗ ನಾಯ್ಕಶಕ್ತಿ,ಕೇಂದ್ರದ ಪ್ರಮುಖರಾದ ಈಶ್ವರ ನಾಯ್ಕ, ನಾಗಪ್ಪ ನಾಯ್ಕ,ವಿಜೇತ್ ಶೆಟ್ಟಿ ವಿಜಯಾ ನಾಯ್ಕ ಹರೀಶ್ ದೇವಾಡಿಗ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.