ಭಟ್ಕಳ–ಹೊನ್ನಾವರ ಕ್ಷೇತ್ರದಲ್ಲಿ ಸಚಿವ ಮಂಕಾಳ ವೈದ್ಯರಿಂದ ಜನತಾದರ್ಶನ “ನಾನು ಸಚಿವನಲ್ಲ ನಿಮ್ಮ ಮನೆ ಮಗ”

Share

ಜನಸೇವೆಯೇ ನನ್ನ ಧ್ಯೇಯ

ಹೊನ್ನಾವರ/ಭಟ್ಕಳ:
ಸಚಿವ ಮಂಕಾಳ ವೈದ್ಯರು ತಮ್ಮ ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಭಟ್ಕಳ–ಹೊನ್ನಾವರ ಕ್ಷೇತ್ರದಲ್ಲಿ ಜನತಾದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಶನಿವಾರ ಹೊನ್ನಾವರದ ತಮ್ಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿ ತಮ್ಮ ಕುಂದು ಕೊರತೆಯನ್ನು ಸಚಿವರ ಮುಂದೆ ಮಂಡಿಸಿದರು. ರವಿವಾರ ಭಟ್ಕಳದ ತಮ್ಮ ಕಚೇರಿಯಲ್ಲಿ ನಡೆದ ಜನತಾದರ್ಶನದಲ್ಲಿಯೂ ಅನೇಕ ಸಾರ್ವಜನಿಕರು ಹಾಜರಾಗಿ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಸಚಿವ ಮಂಕಾಳ ವೈದ್ಯರು ಪ್ರತೀ ತಿಂಗಳು ಇಂತಹ ಜನತಾದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ತಮ್ಮ ಪ್ರಾಥಮಿಕ ಗುರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು – “ನನ್ನ ಕ್ಷೇತ್ರದ ಜನತೆಯ ಹಿತವೇ ನನಗೆ ಮುಖ್ಯ. ನಾನು ಯಾವತ್ತೂ ಸೇವಾ ಮನೋಭಾವನೆಯಲ್ಲಿ ಕೆಲಸ ಮಾಡುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ಸಮಾಜದ ಕಟ್ಟಕಡೆಯ ವ್ಯಕ್ತಿಯು ಕೂಡ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ನಾನು ಸಚಿವ ಎನ್ನುವ ಭಾವನೆ ಇಟ್ಟುಕೊಳ್ಳುವುದು ಬೇಡ, ನಾನು ನಿಮ್ಮ ಮನೆ ಮಗನಂತೆ ನಿಮ್ಮ ಸೇವೆಯಲ್ಲಿ ಯಾವತ್ತೂ ನಿಲ್ಲುತ್ತೇನೆ” ಎಂದು ಜನತೆಗೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರ ಪುತ್ರಿ ಭೀನಾ ವೈದ್ಯ ಅವರು ತಮ್ಮ ತಂದೆಯೊಂದಿಗೆ ಜನತಾದರ್ಶನದಲ್ಲಿ ಪಾಲ್ಗೊಂಡು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಅವರು ಸಚಿವರ ಕೆಲಸಕ್ಕೆ ಸಹಕರಿಸಿ ಸಮಸ್ಯೆಗಳ ಪರಿಹಾರ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಜನತಾದರ್ಶನದಲ್ಲಿ ಅನೇಕ ಮುಖಂಡರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಸಚಿವರ ಆತ್ಮೀಯರು, ಹಿತೈಷಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಹಾಜರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಚಿವ ಮಂಕಾಳ ವೈದ್ಯರ ಸೇವಾ ಮನೋಭಾವ ಮತ್ತು ಜನತೆಗೆ ತಕ್ಷಣದ ಪರಿಹಾರ ಒದಗಿಸುವ ಶೈಲಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!