ಭಟ್ಕಳ: ತಾಲೂಕಿನ ಅಳ್ವೆ ಕೊಡಿಯ ಶ್ರೀಮಾತೇ ದುರ್ಗಾಪರಮೇಶ್ವರಿ ದೇವಿಯು ನವರಾತ್ರಿಯ ಪ್ರಥಮ ದಿನವಾದ ಇಂದು ಬಿಳಿಯ ಬಣ್ಣದ ಸೀರೆಯಿಂದ ಅಲಂಕೃತಗೊಂಡು ಶೈಲ ಪುತ್ರಿ ರೂಪದಲ್ಲಿ ವಿರಾಜಮಾನಗಳಾಗಿ ಬಂದಂತಹ ಭಕ್ತರಿಗೆ ಆಶೀರ್ವದಿಸಿದ್ದಾಳೆ.

ನವರಾತ್ರಿ ಹಬ್ಬವು ದುರ್ಗಾದೇವಿಯ ಒಂಭತ್ತು ರೂಪಗಳ ಆರಾಧನೆಗೆ ಮೀಸಲಾಗಿದೆ. ಮೊದಲ ದಿನದಂದು ಪೂಜಿಸುವ ದೇವಿಯ ರೂಪ ಶೈಲ ಪುತ್ರಿ. ಶೈಲ ಎಂದರೆ ಪರ್ವತ, ಪುತ್ರಿ ಎಂದರೆ ಮಗಳು, ಆದ್ದರಿಂದ ಶೈಲ ಪುತ್ರಿ ಎಂದರೆ ಪರ್ವತಗಳ ಮಗಳು. ಈ ರೂಪದಲ್ಲಿ ದೇವಿಯು ಶುದ್ಧತೆ, ಪ್ರಕೃತಿ ಮತ್ತು ಹೊಸ ಆರಂಭವನ್ನು ಪ್ರತಿನಿಧಿಸುತ್ತಾಳೆ. ಅವಳ ವಾಹನ ನಂದಿ ಹಾಗೂ ಅವಳು ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ.
ನವರಾತ್ರಿ ಮೊದಲ ದಿನದಂದು ಬಿಳಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ ಮತ್ತು ಸೌಂದರ್ಯದ ಸಂಕೇತ. ಈ ದಿನ ಬಿಳಿ ಬಟ್ಟೆಯನ್ನು ಧರಿಸಿ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ದೈವಿಕ ಶಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.