
ಸ್ವಚ್ಛತೆಯೇ ಸೇವೆ ಕಟ್ಟೇವೀರ ಯುವ ಶಕ್ತಿ .
ಭಟ್ಕಳ: ಕಟ್ಟೆ ವೀರ ಯುವಶಕ್ತಿ ಸಂಘದ ವತಿಯಿಂದ ತಾಲೂಕಿನ ಮುಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ಆವರಣದಲ್ಲಿ ಬೆಳೆದು ನಿಂತ ಹಸಿ ಹುಲ್ಲು ಕಸ- ಕಡ್ಡಿಗಳನ್ನು ತೆರೆವು ಗೊಳಿಸುವುದರ ಮುಖಾಂತರ ಸ್ವಚ್ಛತಾ ಕಾರ್ಯ ಕೈಗೊಂಡರು.

ಸ್ವಚ್ಛತೆ ಕಾಪಾಡಿದರೆ ಸುತ್ತಮುತ್ತಲ ಪರಿಸರ ಹಾಗೂ ಆರೋಗ್ಯ ಸ್ಥಿರವಾಗಿರುತ್ತದೆ ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ- ನಿಮ್ಮೆಲ್ಲರ ಆದ್ಯಕರ್ತವ್ಯ ಎಂಬ ಸಂದೇಶ ಸಾರಿದ ಸಂಘಟನೆಯ ಯುವಕರು.

ಕಟ್ಟೆ ವೀರ ಯುವಶಕ್ತಿ ಸಂಘದ ಅಧ್ಯಕ್ಷರಾದ ಚಂದ್ರು ನಾಯ್ಕ್ ಮಾತನಾಡಿ- ಯುವಕರೇ ನಮ್ಮ ದೇಶದ ಶಕ್ತಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಮ್ಮ ಈ ಕಟ್ಟೆ ವೀರ ಯುವಶಕ್ತಿ ಸಂಘವು ಎಂದಿಗೂ ಮುಂಚೂಣಿಯಲ್ಲಿರಲಿದೆ ಎಂದು ಹೇಳಿದರು.
ಈಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೇವೇಂದ್ರ ನಾಯ್ಕ್, ಕಾರ್ಯದರ್ಶಿಯಾದ ಯೋಗೇಶ್ ನಾಯ್ಕ್, ಸದಸ್ಯರಾದ ಅನಂತ್ ನಾಯ್ಕ, ಶೇಷಗಿರಿ ನಾಯ್ಕ್, ಗೋವಿಂದ ನಾಯ್ಕ, ವೆಂಕಟರಮಣ ನಾಯ್ಕ್, ಮಂಜುನಾಥ್ ಡಿ ನಾಯ್ಕ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.