ಭಟ್ಕಳ ನ್ಯಾಯಾಲಯ ಸಂಕೀರ್ಣದಲ್ಲಿ ಲೋಕ್ ಅದಾಲತ್

Share

ಭಟ್ಕಳ: ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ರಾಜೀ ಮೂಲಕ 1,464 ಪ್ರಕರಣಗಳು ಇತ್ಯರ್ಥ ಕಂಡಿದ್ದು, 7, 11,17,729 ರೂಪಾಯಿಗಳು ಪರಿಹಾರ ಹಾಗೂ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ಜೆ.ಎಂ.ಎಫ್‌.ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 230 ಪ್ರಕರಣಗಳು, ಪ್ರಧಾನ ಸಿವಿಲ್ ಹಾಗೂ ಜೆ. ಎಂ. ಎಫ್. ಸಿ. ನ್ಯಾಯಾಲಯದಲ್ಲಿ 550 ಪ್ರಕರಣಗಳು, ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್. ಸಿ ನ್ಯಾಯಾಲಯದಲ್ಲಿ 594 ಪ್ರಕರಣಗಳು ಇತ್ಯರ್ಥಗೊಂಡಂತಾಗಿದೆ.
ಹಿರಿಯ ಸಿವಿಲ್ ನ್ಯಾಯಾಲಯದ ಪ್ರಕರಣಗಳಲ್ಲಿ1.04.16.148 ರೂಪಾಯಿ ವಸೂಲಿ. ಹಾಗೂ ರಸ್ತೆ ಅಪಘಾತ ಪ್ರಕರಣ ಒಂದರಲ್ಲಿ ಮಗನನ್ನು ಕಳೆದುಕೊಂಡ ದಂಪತಿಗೆ11.5 ಲಕ್ಷ ರೂಪಾಯಿ ಪರಿಹಾರ, ಒಟ್ಟು ರೂಪಾಯಿ 68,12,584 ವ ಸೂಲಿಯಾಗಿದೆ.


ಪ್ರಧಾನ ಸಿವಿಲ್ ನ್ಯಾಯಾಲಯದ ಅಮಲ್ ಜ್ಯಾರಿ ಪ್ರಕರಣಗಳಿಂದ2,53,89,260 ರೂಪಾಯಿ ಗಳು, ಚೆಕ್ ಪ್ರಕರಣಗಳಿಂದ78,59,098 ರೂಪಾಯಿಗಳು, ಇತರೇ ಪ್ರಕರಣಗಳಿಂದ ರೂಪಾಯಿ 1,32,000 ವಸೂಲಿ.
ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಅಮಲ್ ಜ್ಯಾರಿ ಪ್ರಕರಣಗಳಿಂದ1,31,56,791 ರೂಪಾಯಿಗಳು, ಚೆಕ್ ಪ್ರಕರಣಗಳಿಂದ42,77,598 ರೂಪಾಯಿಗಳು ಹಾಗೂ ಇತರೇ ಪ್ರಕರಣಗಳಿಂದ1,81,050 ರೂಪಾಯಿಗಳು ವಸೂಲಿ ಆದಂತಾಗಿದೆ.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಕಾಂತ ಕರುಣಿ, ದೀಪಾ ಅರಳಗುಂಡಿ, ಧನವತಿ, ಸಂಧಾನಕಾರರಾದ ಮಂಜುನಾಥ್ ಚಂದ್ರಕಾಂತ್ ಭಟ್, ರವೀಂದ್ರ ನಾಯ್ಕ್, ಸಹನಾ ಮೊಗೇರ್ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಈಶ್ವರ್ ನಾಯ್ಕ್ ಸರಕಾರಿ ಅಭಿಯೋಜಕರು ಹಾಗೂ ವಕೀಲರು ಪಾಲ್ಗೊಂಡಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!