ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘದ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Share

ಪತ್ರಿಕಾ ಪ್ರಕಟಣೆ

ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘ(ರಿ), ಮುರುಡೇಶ್ವರ, ತಾ: ಭಟ್ಕಳ ವತಿಯಿಂದ ದಿನಾಂಕ: 21-09-2025ರ ರವಿವಾರ ಸಂಜೆ 3.30 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಾಡಿಗ ಸಭಾ ಭವನ, ಯಕ್ಷೆಮನೆ, ಬೆಂಗ್ರೆಯಲ್ಲಿ ಪ್ರತಿಭಾಪುರಸ್ಕಾರ ಹಾಗೂ ದೇವಾಡಿಗ ಸಮಾಜ ನೌಕರರ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90%ಕ್ಕಿಂತ ಹೆಚ್ಚು ಅಂಕಪಡೆದ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ (ಕಲಾ,ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ಶೇ. 85%ಕ್ಕಿಂತ ಹೆಚ್ಚಿಗೆ ಹಾಗೂ ಪದವಿ ವಿಭಾಗದಲ್ಲಿ ಕಲಾ,ವಾಣಿಜ್ಯ, ವಿಜ್ಞಾನ, ಬಿ.ಬಿ.ಎ.,
ಬಿ.ಸಿ.ಎ. ಹಾಗೂ ಬಿ.ಬಿ.ಎಂ. ವಿಭಾಗದಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ದೇವಾಡಿಗ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ದಿನಾಂಕ: 17-09-2025 ರೊಳಗೆ ಸಂಘಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದೆ. ಅರ್ಜಿಯ ಜೊತೆಗೆಅಂಕಪಟ್ಟಿಯ ದೃಢೀಕೃತ ನಕಲು ಹಾಗೂ ಆಧಾರ್ ಕಾರ್ಡಿನ ನಕಲು ಪ್ರತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಶ್ರೀ ವೆಂಕಟೇಶ ಎಸ್. ದೇವಾಡಿಗ,
ನಿವೃತ್ತ ಶಿಕ್ಷಕರು,
ಶ್ರೀ ಗಣೇಶ ಕೃಪಾ
ವೀರ ವಿಠ್ಠಲ ರಸ್ತೆ,
ಭಟ್ಕಳ-581 320
ಮೊಬೈಲ್: 9481275147

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
1) ಶ್ರೀ ನವೀನ ದೇವಾಡಿಗ – 90365 42554
2) ಶ್ರೀ ವೆಂಕಟ್ರಮಣ ಹಳದೀಪುರ – 9980135812
3) ಶ್ರೀ ಗೋವಿಂದ್ರಾಯ ದೇವಾಡಿಗ – 9480104344

ತಮ್ಮ ವಿಶ್ವಾಸಿ,

ಅಧ್ಯಕ್ಷರು/ಕಾರ್ಯದರ್ಶಿ
ಉತ್ತರ ಕನ್ನಡ ಜಿಲ್ಲಾ ದೇವಾಡಿಗ ನೌಕರ ಸಂಘ(ರಿ),
ಮುರುಡೇಶ್ವರ, ತಾ: ಭಟ್ಕಳ(ಉ.ಕ.)

Leave a Reply

Your email address will not be published. Required fields are marked *

error: Content is protected !!