ಭಟ್ಕಳ: ತೆಲಂಗಾಣ ನೊಂದಾಯಿತ ಅಶೋಕ್ ಲೈಲ್ಯಾಂಡ್ ಕಂಟೇನರ್ ವಾಹನ ಸಂಖ್ಯೆ ಟಿ ಎಸ್ 12 ಯು ಸಿ 6464 ರಲ್ಲಿ ಆರೋಪಿಗಳಾದ ಅಬೂಬಕರ್ ಸಲೀಂ ಗಂಗೊಳ್ಳಿ ವಯಸ್ಸು 44 ಮೋಹಿದಿನ್ ಸ್ಟ್ರೀಟ್ ಎರಡನೇ ಕ್ರಾಸ್ ಮದೀನಾ ಕಾಲೋನಿ ಭಟ್ಕಳ್, ಹಮೀದ್ ಅಬ್ದುಲ್ಲಾ ಯೇಸು 54 ಮದ್ದೂಡ ಕೋಟಗಣಿ ಕಾಸರಗೋಡು ಕೇರಳ ಆಸಿಫ್ ಫ್ ಮೊಹಮ್ಮದ್ ಅನೀಶ್ ವಯಸ್ಸು 26 ಸಹಪುರ ಬುದಾನ ಮುಜಫರ್ ನಗರ್ ಉತ್ತರ ಪ್ರದೇಶ್ ಸಾಹುಲ್ ಅಮಿತ್ ಲಾಲ್ ದರ್ವಾಜ್ ಚಾರ್ಮಿನಾರ್ ಹೈದರಾಬಾದ್ ತೆಲಂಗಾಣ ಹಾಲಿ ವಾಸ ಕೊಕ್ಕನ ಕೊಡಲು ಹೌಸ್ ಬೇಲಾ ಕಾಸರಗೋಡು ಇವರುಗಳು ಏಳು ಲಕ್ಷ ಮೌಲ್ಯದ 10 ಜಾಣವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ವದೆ ಮಾಡುವ ಉದ್ದೇಶದಿಂದ ನೀರು ಹುಲ್ಲು ಹಾಗೂ ಯಾವುದೇ ರೀತಿಯ ಆಹಾರ ಕೊಡದೆ, ಸಕ್ಸಮ ಪ್ರಾಧಿಕಾರದಿಂದ ವಾಹನದಲ್ಲಿ ಜಾನುವಾರು ಸಾಗಾಟ ಮಾಡಲು ಪರವಾನಿಗೆ ಪಡೆಯದೆ ಕೇರಳ ಕಡೆಯಿಂದ ಭಟ್ಕಳದ ಹನಿಪಾಬಾದ್ ಕಡೆಗೆ ಸಾಗಾಟ ಮಾಡುತ್ತಿರುವಾಗ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಹನಿಫಾಬಾದ್ ಪಿ ಬಿ ಇಬ್ರಾಹಿಮ್ ಇವರ ಪೆಟ್ರೋಲ್ ಬಂಕ್ ಹತ್ತಿರ ಸಿಪಿಐ ಮಂಜುನಾಥ್ ಲಿಂಗಾ ರೆಡ್ಡಿ ಅವರು ದಾಳಿ ನಡೆಸಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಸಿ ಎಚ್ ಸಿ ನಾರಾಯಣ್ ಇವರು ದೂರು ದಾಖಲಿಸಿಕೊಂಡು ತನಿಕೆಯನ್ನ ಮುಂದುವರಿಸಿದ್ದಾರೆ.
ವರದಿ: ಉಲ್ಲಾಸ ಶಾನ್ಭಾಗ್