ಅಲೆಗಳ ಹೊಡೆತಕ್ಕೆ ಅರಬಿ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ಬೋಟ್

Share

ಭಟ್ಕಳ: ಭಟ್ಕಳದ ಕಾಯ್ಕಿಣಿಯ ಅಣ್ಣಪ್ಪ ಬೈರಾ ಮೊಗೇರ ಅವರಿಗೆ ಸೇರಿದ ಪರ್ಶಿಯನ್ ಬೋಟ್ ಒಂದು ಮುರುಡೇಶ್ವರದ ನೇತ್ರಾಣಿ ದ್ವಿಪದ ಸಮೀಪ ಮೀನುಗಾರಿಕೆ ನಡೆಸುವ ವೇಳೆ ದೊಡ್ಡ ಅಲೆಗಳ ಹೊಡೆತಕ್ಕೆ ಮುಳುಗಡೆಯಾಗಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಅಲ್ಲೇ ಹತ್ತಿರ ಮೀನುಗಾರಿಕೆ ಮಾಡುತ್ತಿದ್ದ ಉಳಿದ ಬೋಟುಗಳು ರಕ್ಷಣೆಗೆ ಧಾವಿಸಿದೆ. ಈ ಬೋಟಿನಲ್ಲಿ ಸುಮಾರು 20ರಿಂದ 30 ಮೀನುಗಾರರು ಇದ್ದು ಎಲ್ಲಾ ಮೀನುಗಾರನ್ನ ರಕ್ಷಣೆ ಮಾಡಲಾಗಿದೆ . ಬೋಟಿನಲ್ಲಿದ್ದ ಬಲೇ ಇತರೆ ಸಾಮಗ್ರಿಗಳನ್ನು ರಕ್ಷಿಸಲು ಹರ ಸಾಹಸ ಪಟ್ಟರು ಮೀನುಗಾರರ ಪ್ರಯತ್ನ ಪಲಿಸದೆ ಬೋಟು, ಬಲೆಗಳು ಮತ್ತು ಇತರೆ ಸಾಮಗ್ರಿಗಳು ಸಮುದ್ರದಲ್ಲಿ ಮುಳುಗಿದವು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!