
ಭಟ್ಕಳ: ತಾಲೂಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಮಿಕನ ಸೊಗಿನಲ್ಲಿ ಅನ್ವರಭಾಷಾ ಮಹ್ಮದ್ ಸಾಬ್ ಎಂಬ ವ್ಯೆಕ್ತಿಗೆ ನಿಮ್ಮ ಮಗಳ ಖಾಸಗಿ ಫೋಟೋ ನಮ್ಮಲ್ಲಿದೆ ಎಂದು ಕರೆಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಇಲಾಖೆ
ದಿನಾಂಕ 20-08-2025 ರಂದು ರಂದು ಬೆಳಗ್ಗೆ 11-00 ಗಂಟೆಗೆ ಫಿರ್ಯಾಧಿ ಅನ್ವರಭಾಷಾ ಮಹ್ಮದ್ ಸಾಬ್ ಪ್ರಾಯ :57 ವರ್ಷ ಉದ್ಯೋಗ:ತರಕಾರಿ ವ್ಯಾಪಾರ ಭಟ್ಟಗಾಂವ್, ಕಿದ್ವಾಯಿ ರಸ್ತೆ, ಭಟ್ಕಳ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ ನಮೂದಾದ ಯಾರೋ ದಿನಾಂಕ 16/08/2025 ರಂದು ರಾತ್ರಿ 8-35 ಗಂಟೆಯ ಸಮಯಕ್ಕೆ ಪಿರ್ಯಾದಿಯು ಅಂಗಡಿಯಲ್ಲಿರುವಾಗ ಅನ್ವರಭಾಷಾ ಮೊಬೈಲಿಗೆ ಕರೆಮಾಡಿ ನಿಮ್ಮ ಮಗಳಾದ ಸಾನೀಯಾ ಇವಳ ಖಾಸಗಿ ಫೋಟೋ ಮತ್ತು ವಿಡಿಯೋ ತನ್ನ ಹತ್ತಿರ ಇದೇ ನೀನು ತನಗೆ ಅರ್ಜಂಟಾಗಿ 20 ಲಕ್ಷ ರೂ ಹಣ ಕೊಡಬೇಕು ಇಲ್ಲವಾದಲ್ಲಿ ನಿನ್ನ ಮಗಳ ಪೊಟೊ ಮತ್ತು ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಅಂತಾ ಹೇಳಿ ಪಿರ್ಯಾಧಿಗೆ ಹಣಕ್ಕೆ ಬೇಡಿಕೆ ಇಟ್ಟು ಹೆದರಿಸಿ ದಿನಾಂಕ 18/08/2025 ಮತ್ತು 19/08/2025 ರಂದು ಮಧ್ಯಾಹ್ನ 1-06 ನಿಮಿಷಕ್ಕೆ ರಂದು ಅನ್ವರಭಾಷಾ ಹೆಂಡತಿ ಸಾಹೀರಾ ಬಾನು ಕರೆ ಮಾಡಿ 15 ಲಕ್ಷ ರೂ ಆದರೂ ಹಣ ಕೊಡಬೇಕು ಅಂತಾ ಒತ್ತಾಯ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ವ್ಯಕ್ತಿಗಳ ವಿರುದ್ಧ ನೀಡಿದ ದೂರು ಸ್ವೀಕರಿಸಿಕೊಂಡು ಭಟ್ಕಳ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಭಟ್ಕಳ ಶಹರ ಪೊಲೀಸ ಠಾಣೆಯ ನವೀನ ಎಸ್ ನಾಯ್ಕ ಪಿ.ಎಸ್.ಐ ರವರ ನೇತ್ರತ್ವದಲ್ಲಿ ವಿಶೇಷ ತಂಡವನ್ನು ಮಾಡಿ ಆರೋಪಿತರಾದ 1) ಮೊಹಮ್ಮದ ಫಾರಿಸ್ ತಂದೆ ಅಬ್ದುಲ್ ಮುತಲ್ಲಬ್ ಕೋಡಿ ಪ್ರಾಯ : 20 ವರ್ಷ ವೃತ್ತಿ : ಕೆಲಸ ಎನೂ ಇಲ್ಲಾ ಸಾ: ಅಬ್ಬುಹುರೇರಾ ಕಾಲೊನಿ ಭಟ್ಕಳ 2) ಮೊಹಮ್ಮದ ಅರ್ಶದ ತಂದೆ ಮೊಹಮ್ಮದ ಜುಬೇರ್ ಬ್ಯಾರಿ ಪ್ರಾಯ-22 ವರ್ಷ ವೃತ್ತಿ ಗುತ್ತಿಗೆ ಕೆಲಸ ವಾಸ ಮೂಸಾನಗರ ಭಟ್ಕಳ 3) ಅಮನ್ ತಂದೆ ಮಸೂದ ಖಾನ್ ಪ್ರಾಯ-20 ವರ್ಷ ವೃತ್ತಿ ಸಿ.ಎಸ್.ಇ-ಡಿ.ಎಸ್. ಇಂಜಿನಿಯರಿಂಗ್ ವಿದ್ಯಾರ್ಥಿ ವಾಸ :ಹಾಲಾಡಿ 76 ಜನತಾ ಕಾಲೊನಿ ಲಕ್ಷ್ಮಿನರಸಿಂಹ ದೇವಸ್ಥಾನ ರಸ್ತೆ, ಕುಂದಾಪುರ ಉಡುಪಿ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಈ ಕಾರ್ಯಾಚರಣೆಯನ್ನು ಮಾನ್ಯ ಪೋಲಿಸ್ ಉಪ ಅಧೀಕ್ಷಕರು ಮಹೇಶ ಎಂ.ಕೆ ರವರ ಮಾರ್ಗದರ್ಶನದಲ್ಲಿ, ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ದಿವಾಕರ ಪಿ ಎಮ್ ರವರ ನೇತ್ರತ್ವದಲ್ಲ. ಮತ್ತು ಶ್ರೀ ನವೀನ ನಾಯ್ಕ, ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಸಿ.ಎಚ್.ಸಿ- ದಿನೇಶ ನಾಯಕ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಸಿ.ಪಿ.ಸಿ-ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ, ಮತ್ತು ಲೊಕೇಶ ಕತ್ತಿ, ಮಹೇಶ ಅಮಗೋತ, ರಾಘವೇಂದ್ರ ಗೌಡ, ಜಗದೀಶ ನಾಯ್ಕ, ನೇಯವರು, ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಬಬನ್ ಮತ್ತು ಉದಯ ಗುಣಗಾ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.