
ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಘಟನೆ.
ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳದ ನೂರ್ ಮಸೀದಿಯ ಎದುರು ಶನಿವಾರ ಬೆಳಗ್ಗೆ ನಡೆದಿದೆ.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮೃತರ ಪತ್ನಿ ಭಾರತಿ ಸಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾಳೆ, ಮೃತರು ಮುರುಡೇಶ್ವರ ಬಸ್ತಿಯ ದೇವಿಕಾನ ನಿವಾಸಿ ಈಶ್ವರ್ ಮಂಜಪ್ಪ ನಾಯ್ಕ್ ಮೂಲತಃ ಕರಿಕಲ್ ಗ್ರಾಮದವರೆಂದು ಹೇಳಲಾಗಿದೆ.
ಇಬ್ಬರು ತಮ್ಮ ಮನೆಯಿಂದ ಬೈಕ್ ಮೂಲಕ ಭಟ್ಕಳದ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಟ್ಯಾಂಕರ್ ಹಾಗೂ ಬೈಕ್ ಶಿರಾಲಿ ಕಡೆಯಿಂದ ಭಟ್ಕಳ ಬೈಪಾಸ್ ಕಡೆ ತೆರಳುತ್ತಿತ್ತು ಈ ವೇಳೆ ನೂರ್ ಮಸೀದಿ ಹತ್ತಿರ ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಮುಂಭಾಗದ ಚಕ್ರ ಹರಿದಿದೆ ಹೆಲ್ಮೆಟ್ ಧರಿಸಿದ್ದರು ಕೂಡ ಚಕ್ರಕ್ಕೆ ತಲೆ ಚಿದ್ರವಾಗಿದೆ, ಈ ವೇಳೆ ಹಿಂಬದಿ ಕುಳಿತಿದ್ದ ಮೃತರ ಪತ್ನಿ ಸಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮೃತ ದೇಹದ ಮುಂದೆ ಪತ್ನಿಯ ಆಕ್ರಂದನ ಹೃದಯ ಕುಲುಕುವಂತಿತ್ತು.
ಭಟ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.