
ಮಹತೋಭಾರ ಶ್ರೀ ಮುರುಡೇಶ್ವರನಿಗೆ ಶ್ರದ್ಧಾ ಭಕ್ತಿಯಿಂದ ಲೋಕಕಲ್ಯಾಣಾರ್ಥ ನಡೆದ ಅಯುತ ಬಿಲ್ವಾರ್ಚನೆ
ಶ್ರೀ ಮುರುಡೇಶ್ವರ ದೇವರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ವಿಶಿಷ್ಟ ಅಯುತ ಬಿಲ್ವಾರ್ಚನೆಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಭಾರಿಮಳೆಯ ನಡುವೆಯೂ ಮುರುಡೇಶ್ವರ ಬೈಲೂರು ಕಾಯ್ಕಿಣಿ ಹಾಗೂ ತಾಲೂಕಿನ ಇತರೆ ಭಾಗದ ಭಕ್ತರು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಬಿಲ್ವಪತ್ರೆಗಳನ್ನು ಹೊತ್ತು ದೇವಸ್ಥಾನಕ್ಕೆ ತಂದು ಶ್ರೀ ಮುರುಡೇಶ್ವರನಿಗೆ ಸಮರ್ಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಉತ್ಸಾಹದಿಂದ ಬಿಲ್ವಪತ್ರೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅರ್ಚಕ ಜಯರಾಮ ಅಡಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮವಾಗಿ ಏಕಾದಶ ರುದ್ರ ಹೋಮ ಆಯೋಜಿಸಲಾಗಿತ್ತು.

ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಸತೀಶ್ ಶೆಟ್ಟಿ ದೇವಸ್ಥಾನ ವ್ಯವಸ್ಥಾಪಕರಾದ ಮಂಜುನಾಥ್ ಶೆಟ್ಟಿ, ಎಸ್ ಎಸ್ ಕಾಮತ್ ಬೀನಾ ವೈದ್ಯ ಶಂಕರ್ ಭಟ್ರು ಹಿತ್ತಲು ಗಣೇಶ್ ನಾಯ್ಕ್ ,ಕೃಷ್ಣ ನಾಯ್ಕ್ ಹಾಗೂ ಇನ್ನಿತರ ಪ್ರಮುಖರು ಊರ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
