ಭಟ್ಕಳ: ಸಿಂಡಿಕೇಟ್ ಬ್ಯಾಂಕ್ (ಪ್ರಸ್ತುತ ಕೆನರಾ ಬ್ಯಾಂಕ್)ನ ನಿವೃತ್ತ ಉದ್ಯೋಗಿ, ಹಿಂದೂ ಪರ ಹೋರಾಟಗಾರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಂಕರ ಶೆಟ್ಟಿ ಅವರು ರವಿವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ನಿದನರಾಗಿದ್ದಾರೆ.
ಹಿಂದೂ ಧರ್ಮ ಮತ್ತು ಸಮಾಜದ ಏಳಿಗೆಯ ಕುರಿತು ಸದಾ ಚಿಂತಿಸುತ್ತಿದ್ದ ಅವರು ಹಿಂದೂ ಸಮಾಜದ ಪ್ರತಿಯೊಂದು ಕೆಲಸದಲ್ಲಿಯೂ ಕೂಡಾ ಮುಂಚೂಣಿಯಲ್ಲಿ ನಿಂತು ಸ್ವತಹ ಮಾಡುತ್ತಿದ್ದರಲ್ಲದೇ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು.
ಆರ್.ಎಸ್.ಎಸ್., ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಪೇಟೆ ಹನುಮಂತ ದೇವಸ್ಥಾನದ ಸದಸ್ಯ, ಮಾರಿಕಾಂಬ ದೇವಸ್ಥಾನದ ಧರ್ಮದರ್ಶಿ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿ, ಮಣ್ಕುಳಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದರು. ಡಾ. ಚಿತ್ತರಂಜನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅವರ ಪ್ರತಿಯೊಂದು ಸಮಾಜ ಸೇವೆಯಲ್ಲಿಯೂ ಜೊತೆಯಾಗಿ ನಿಲ್ಲುತ್ತಿದ್ದದರು. ನಿವೃತ್ತಿಯ ನಂತರ ಪೂರ್ಣಾವಧಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶಂಕರ ಶೆಟ್ಟಿ ಅವರ ನಿದನಕ್ಕೆ ಮಣ್ಕುಳಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಗಾಣಿಗ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
