ಸಚಿವರ ಮಂಕಾಳು ವೈದ್ಯರಿಂದ ಭಟ್ಕಳದ ಸಚಿವರ ಕಛೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ
ಜನ ಸಾಮಾನ್ಯರ ಸೇವೆಯೆ ಈ ಜನತಾ ದರ್ಶನದ ಮುಖ್ಯ ಉದ್ದೇಶ ಸಚಿವ ಮಂಕಾಳ ವೈದ್ಯ
ನಾವು ಜನತಾ ದರ್ಶನವನ್ನು ನಡೆಸುವ ಮುಖ್ಯ ಉದ್ದೇಶ ಜನ ಸಾಮಾನ್ಯರಿಗೆ ಇರುವ ಮೂಲಭೂತ ಸೌಕರ್ಯದ ಕೊರತೆ ನೀಗಿಸಿ ಜನ ಸೇವೆಯನ್ನು ಮಾಡುವ ಉದ್ದೇಶವಾಗಿರುತ್ತದೆ ಎಂದು ಸಚಿವರು ತಮ್ಮ ಭಟ್ಕಳ ಕಛೇರಿಯಲ್ಲಿ ಮಂಗಳವಾರ ನಡೆದ ಜನತಾ ಧರ್ಶನ ಕಾರ್ಯಕ್ರಮದಲ್ಲಿ ಹೇಳಿದರು .
ಸಚಿವ ಮಂಕಾಳು ವೈದ್ಯರು ತಾಲೂಕಿನ ತಮ್ಮ ಕಛೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಂದರ್ಬದಲ್ಲಿ ಅಸಂಖ್ಯ ಸಾರ್ವಜನಿಕರು ತಮ್ಮ ಕುಂದುಕೊರತೆಯನ್ನು ಸಚಿವರ ಮುಂದಿಟ್ಟು ಸಮಸ್ಯೆಗೆ ಪರಿಹಾರವನ್ನು ಪಡೆದುಕೊಂಡರು
ಜನತಾ ದರ್ಶನದಲ್ಲಿ ಸಚಿವ ಮಂಕಾಳು ವೈದ್ಯರು ಮಾತನಾಡಿ ಮುಖ್ಯವಾಗಿ ಪ್ರತಿಯೊಬ್ಬ ಪ್ರಜೇಗಳಿಗೂ ಮೊಟ್ಟಮೊದಲು ಮೂಲಭೂತ ಸೌಕರ್ಯ ದೊರೆಯಬೇಕು ನಂತರ ಉಳಿದ ಸೌಲಬ್ಯಗಳ ಬಗ್ಗೆ ಗಮನ ಹರಿಸಬೇಕು ನಮ್ಮ ಈ ಜನತಾ ದರ್ಶನದ ಮುಖ್ಯ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಮೂಲಭೂತ ಸೌಲಬ್ಯವನ್ನು ವದಗಿಸುವುದಾಗಿದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ , ಕಾರ್ಯದರ್ಶಿ ಸುರೇಶ ನಾಯ್ಕ ನಾರಾಯಣ ನಾಯ್ಕ , ವೆಂಕಟರಮಣ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
ಸಚಿವರ ಮಂಕಾಳು ವೈದ್ಯರಿಂದ ಭಟ್ಕಳದ ಸಚಿವರ ಕಛೇರಿಯಲ್ಲಿ ಜನತಾ ದರ್ಶನ
