ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ

Share

ಭಟ್ಕಳ ತಾಲೂಕಿನ ಅಳವೆ ಕೊಡಿ ಕಡಲತೀರದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ
ಇಂದು ಕರಿ ಕಲ್ ತೆಂಗಿನಗುಂಡಿ ಭಾಗದಲ್ಲಿ ದ್ರೋಣ್ ಮೂಲಕ ಹುಡುಕಾಟ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ
ಈ ನಡುವೆ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಶೋಧಕಾಗಿ ಭಟ್ಕಳಕ್ಕೆ ಆಗಮಿಸಿದೆ, ತೆಂಗಿನಗುಂಡಿ ಅಳವೇ ಕೋಡಿ ತೀರದಲ್ಲಿ ಲೈಫ್ ಜಾಕೆಟ್ ಧರಿಸಿ ಅವರ ತಂಡದ ಸದಸ್ಯರು ಸ್ಥಳೀಯರ ಜೊತೆಗೂಡಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಜುಲೈ 30 ರಂದು ಮಧ್ಯಾಹ್ನ ಅಳವೆ ಕೊಡಿ ಅಳಿವೇ ಭಾಗದಲ್ಲಿ ಗಿಲ್ನೆಟ್ ದೋಣಿ ಮುಗುಚಿ ಆರು ಜನ ಮೀನುಗಾರರು ನೀರು ಪಾಲಾಗಿದ್ದರು ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು ಇನ್ನು ನಾಲ್ವರು ನಾಪತ್ತೆಯಾಗಿದ್ದರು ಗುರುವಾರದಂದು ಜಾಲಿಯ ರಾಮಕೃಷ್ಣ ಮೊಗೇರ್ ಅವರ ಮೃತ ದೇಹ ಹೊನ್ನೇ ಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿತ್ತು.
ಕಳೆದ ಮೂರು ದಿನಗಳಿಂದ ಸ್ಥಳೀಯ ಮೀನುಗಾರರು ಇಡೀ ಸಮುದ್ರವನ್ನು ಶೋಧಿಸುತ್ತಿದ್ದಾರೆ ಕಣ್ಮರೆಯಾದ ಸತೀಶ್, ಗಣೇಶ್ ಹಾಗೂ ನಿಶ್ಚಿತ್ ಮೊಗೇರ್ ಇವರ ಸುಳಿವು ಸಿಕ್ಕಿಲ್ಲ.
ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಈಗ ದೋಣಿಯ ಮೂಲಕ ಹುಡುಕಾಟ ನಡೆಸುತ್ತಿದೆ ಕಣ್ಮರೆಯಾದ ಮೀನುಗಾರರು ಕೂಡಲೇ ಸಿಗಲಿ ಎಂದು ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೀನುಗಾರರಿಗೆ ಕಿವಿಮಾತು ಹೇಳಿದ ಈಶ್ವರ್ ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ದಯವಿಟ್ಟು ಲೈಫ್ ಜಾಕೆಟ್ ಧರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ

Leave a Reply

Your email address will not be published. Required fields are marked *

error: Content is protected !!