ಭಟ್ಕಳ:ತಾಲ್ಲೂಕಿನ ಮಾರುಕೇರಿ ಅಂಚೆ ಕಚೇರಿಯಲ್ಲಿ ಕಳ್ಳರು ಬೀಗ ಮುರಿದು ₹16,000 ನಗದು ಕಳವು ಮಾಡಿಕೊಂಡು ಹೋಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ಮಾರುಕೇರಿ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯೊಬ್ಬರು ಜುಲೈ 22 ರಂದು ಅಂಚೆ ವ್ಯವಹಾರದ ಉಳಿದಿದ್ದ ₹16,000 ನಗದು ಹಣವನ್ನು ಕಚೇರಿಯ ಕಪಾಟಿನಲ್ಲಿ ಇಟ್ಟು, ಮಧ್ಯಾಹ್ನ 3 ಗಂಟೆಗೆ ಕಚೇರಿಯಿಂದ ಹೊರಟಿದ್ದರು.ಅವರನ್ನು ಜುಲೈ 23ರಂದು ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬರುವಾಗ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕಪಾಟಿನಲ್ಲಿದ್ದ ನಗದು ಕಳವಾಗಿರುವುದು ಸ್ಪಷ್ಟವಾಗಿದೆ. ಕಳ್ಳರು ರಾತ್ರಿ ವೇಳೆಯಲ್ಲಿ ಬಾಗಿಲು ಮುರಿದು ಒಳ ನುಗ್ಗಿದ್ದು, ಹಣ ಕಳವು ಮಾಡಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಅಂಚೆ ಕಚೇರಿಯ ಸಿಬ್ಬಂದಿ ಮಾಸ್ತಿ ಗೊಯ್ದ ಗೊಂಡ ದೂರು ನೀಡಿದ್ದು
ಪ್ರಕರಣವನ್ನು ದಾಖಲಿಸಿ ಕೊಂಡ ಗ್ರಾಮಿಣ ಠಾಣೆ
ಎಸ್ ಐ ರಾಜೇಶ್ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
ಭಟ್ಕಳ ತಾಲ್ಲೂಕಿನ ಮಾರುಕೇರಿ ಅಂಚೆ ಕಚೇರಿಯಲ್ಲಿ ₹16,000 ನಗದು ಕಳವು
