” ಪೊಲೀಸ್_ ಪ್ರೆಸ್ ” ಒಂದು ನಾಣ್ಯದ ಎರೆಡು ಮುಖಗಳು -ಕ.ಕಾ.ಪ.ಧ್ವನಿ ಸಂಘ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ

Share

ವಿಜಯನಗರ ಜಿಲ್ಲೆ ಕೂಡ್ಲಿಗಿ : ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ” ಪ್ರೆಸ್ ” , ಹಾಗೂ ಕಾನೂನು ಅನುಷ್ಠಾನ ಶಾಂತಿಯುತ ಸಮಾಜಕ್ಕಾಗಿ ” ಪೊಲೀಸ್ ” ಅತ್ಯಗತ್ಯವಾಗಿವೆ. ಇವರೆಡೂ ಒಂದು ನಾಣ್ಯದ ಎರೆಡು ಮುಖಗಳಾಗಿವೆ , ಪ್ರಜಾಪ್ರಭುತ್ವ ವ್ಯವಸ್ಥೆಗೆ ಇವು ಅಡಿಪಾಯಗಳಾಗಿವೆ ಎಂದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ , ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕ.ಕಾ.ಪ.ಧ್ವನಿ ಸಂಘದ ಕೂಡ್ಲಿಗಿ ತಾಲೂಕು ಘಟಕದಿಂದ , ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಎಸ್ ಎಸ್ ನಾರಾಯಣ ಸೂಪರ್ ಸ್ಪೆಷಲಿಸ್ಟ್ ಸೆಂಟರ್ ದಾವಣಗೆರೆ ಇವರ ಜಂಟಿ ಸಹಭಾಗಿತ್ವದಲ್ಲಿ. “ವಿಶ್ವ ಪತ್ರಿಕಾ ದಿನಾಚರಣೆ ” ಪ್ರಯುಕ್ತ ಆಯೋಜಿಸಲಾಗಿದ್ದ , ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸಮಾಜದ ಎರೆಡು ಕಣ್ಣುಗಳಂತೆ ಕಾರ್ಯ ನಿರ್ವಹಿಸುತ್ತಿರುವ , ” ಪ್ರೆಸ್ ” ಹಾಗೂ ” ಪೊಲೀಸ್ ” ಕ್ಷೇತ್ರಗಳನ್ನೇ ಸರ್ಕಾರ ನಿರ್ಲಕ್ಷ್ಯಕ್ಕೀಡು ಮಾಡಿರುವುದು ಖಂಡನೀಯವಾಗಿದೆ ಎಂದರು. ಬಹು ವರ್ಷಗಳಿಂದಲೂ ಪತ್ರಕರ್ತರ ಹಕ್ಕೊತ್ತಾಯಗಳನ್ನು ಸರ್ಕಾರ ಈಡೇರಸುತ್ತಿಲ್ಲ ,
ಪತ್ರಿಕೆ ಮತ್ತು ಪತ್ರಕರ್ತರ ಸಂಕಷ್ಟವನ್ನು ಸರ್ಕಾರ ಅರಿತು ಶೀಘ್ರವೇ ಸ್ಪಂಧಿಸಬೇಕೆಂದರು. ಪತ್ರಕರ್ತರಿಗೆ ಸರ್ಕಾರವು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪತ್ರಕರ್ತರಿಗೆ ನೀಡಿಲ್ಲ , ಕಾರಣ ಪತ್ರಕರ್ತರೆಲ್ಲರೂ ಒಗ್ಗೂಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಪತ್ರಕರ್ತರು ಸಾರ್ವಜನಿಕ ವರದಿ ಮಾಡಬೇಕಾಗಿದೆ. ಪತ್ರಕರ್ತರು ಸಾರ್ವಜನಿಕ ವರದಿ ಮಾಡಲು , ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು. ಸರ್ಕಾರದವರು ಹಾಗೂ ರಾಜಕಾರಣಿಗಳು , ಸಂಬಂಧಿಸಿದ ಇಲಾಖೆಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದು ಸಲ್ಲದು ಪತ್ರಕರ್ತರಿಗೆ ಎಷ್ಟೊಂದು ಸಂಕಷ್ಟ ನೋವುಗಳಿದ್ದರೂ , ಸಾಮಾಜಿಕ ಕಾಳಜಿ ಜನಪರ ಹಿತಕ್ಕಾಗಿ ವರದಿ ಮಾಡಲು ಹಿಂಜರಿಯುವುದಿಲ್ಲ. ಹಿಂಗಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ , ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ,
ಡಿ ವೈ ಎಸ್ ಪಿ ಮಲ್ಲೇಶ್ ದೊಡ್ಮನೆ ,
ಡಿ ಹೆಚ್ ಓ ಡಾ.ಶಂಕರ್ ನಾಯ್ಕ , ತಾಲೂಕು ವೈದ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ , ಬಾಣದ ಶಿವಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರ ಆಪ್ತ ಸಹಾಯಕರಾದ ಜಿ.ಮರುಳು ಸಿದ್ದಪ್ಪ , ಹಾಗೂ ದಿನಕರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್ . ಸಾರ್ವಜನಿಕ ಆಸ್ಪತ್ರೆಯ ವೈಧ್ಯರು , ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಾಲುಮನೆ ರಾಘವೇಂದ್ರ , ಪ ಪಂ ಸದಸ್ಯರಾದ ಊರಮ್ಮ, ಸರಸ್ವತಿ ರಾಘವೇಂದ್ರ. ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ಸುನೀಲ್ ಗೌಡ , ಸಮಾಜ ಸೇವಕ ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರೆಹಮಾನ್ ಖಾನ್ , ಡಾ॥ ರಾಕೇಶ್, ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಯ ವೈದ್ಯ ಡಾ॥ ರಾಕೇಶ್ ವೇದಿಕೆಯಲ್ಲಿದ್ದರು. ಆರೋಗ್ಯ ಸಿಬ್ಬಂದಿಗಳಾದ ಗುಡ್ಡಪ್ಪ, ಕಾರ್ತಿಕ್, ಅಂಜಿನಪ್ಪ, ಸೃಷ್ಟಿ, ಲಾವಣ್ಯ, ವಾತ್ಸಲ್ಯ, ಕಾ. ನಿ. ಪ. ಧ್ವನಿ ಸಂಘದ ಪದಾಧಿಕಾರಿಗಳಾದ ಬಿ ರಾಘವೇಂದ್ರ, ಕೆ ತಿಪ್ಪೇಸ್ವಾಮಿ. ಮಂಜುನಾಥ, ಅನಿಲ್ ಕುಮಾರ್, ನಾರಾಯಣ, ಬಣಕಾರ್ ಮೂಗಪ್ಪ, ಎಂ.ಪಿ.ರಮೇಶ್, ವಸಂತ, ಕೆ. ಎಸ್. ವೀರೇಶ್, ವಾಗೀಶ್ ಮೂರ್ತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕ.ಕಾ.ಪ.ಧ್ವನಿ ಸಂಘದಿಂದ , ಅನೇಕ ಗಣ್ಯರಿಗೆ ಗೌರವ ಸನ್ಮಾನ ಮಾಡಲಾಯಿತು. ತಾಲೂಕಿನ ವಿವಿದೆಡೆಗಳಿಂದ ಅಗಮಿಸಿದ್ದ ಅನೇಕರು , ಪಟ್ಟಣದ ನೂರಾರು ನಾಗರೀಕರು , ಸಾರ್ವಜನಿಕರು ಆರೋಗ್ಯತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!