ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿಜೇತರಾದವಿದ್ಯಾರ್ಥಿಗಳಿಗೆ ಪದಕ ವಿತರಣೆ

Share

ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿಜೇತರಾದ
ವಿದ್ಯಾರ್ಥಿಗಳಿಗೆ ಪದಕ ವಿತರಣೆ
೨೦೨೪-೨೦೨೫ ನೇ ಸಾಲಿನ ಒಲಿಂಪಿಯಾಡ ಪರೀಕ್ಷೆಯಲ್ಲಿ ವಿಜೇತರಾದ
ವಿದ್ಯಾರ್ಥಿಗಳಿಗೆ ಪದಕ ವಿತರಣಾ ಕಾರ್ಯಕ್ರಮವು ದಿನಾಂಕ ೦೫.೦೭.೨೦೨೫
ಶನಿವಾರದಂದು ಇಲ್ಲಿನ ರೋಷನಿ ಆಡಿಟೋರಿಯಮ್‌ನಲ್ಲಿ ಅದ್ದೂರಿಯಿಂದ
ನಡೆಯಿತು.
೨೦೨೪-೨೦೨೫ ನೇ ಶೈಕ್ಷಣಿಕ ವರ್ಷದ ಒಲಿಂಪಿಯಾಡನಲ್ಲಿ ೧೫೩ ವಿದ್ಯಾರ್ಥಿಗಳು
ಪರೀಕ್ಷೆಗೆ ಕುಳಿತಿದ್ದು ಅದರಲ್ಲಿ ೫೨ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಆಯ್ಕೆಯಾಗಿದ್ದು ನಮ್ಮ ಹೆಮ್ಮೆಯ ವಿಷಯ. ಹಾಗೇಯೇ ೩
ವಿದ್ಯಾರ್ಥಿಗಳು ಒಲಿಂಪಿಯಾಡ ಟಾಪರ್ ೭೬ ವಿದ್ಯಾರ್ಥಿಗಳು ವಲಯದಲ್ಲಿ
ಟಾಪರ್‌ರಾಗಿ ಆಯ್ಕೆಯಾಗಿರುತ್ತಾರೆ. ಸುಮಾರು ೮೦ ವಿದ್ಯಾರ್ಥಿಗಳು
ಚಿನ್ನದ ಪದಕ ೫೦ ವಿದ್ಯಾರ್ಥಿಗಳು ಬೆಳ್ಳಿಯ ಪದಕ ಹಾಗೂ ೨೩
ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದಿರುತ್ತಾರೆ. ಇದರಲ್ಲಿ
ದ್ವೀತೀಯ ಹಂತದ ಪರೀಕ್ಷೆಯಲ್ಲಿ ೨೨ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೀನಾ ವೈದ್ಯ ಶಿಕ್ಷಣ
ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಗೆ,ಬಂದರು
ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್
ವೈದ್ಯರವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ
ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು, ಬೀನಾ
ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕ-
ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!