ಭಟ್ಕಳ: ಜಿ.ಎಸ್.ಬಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ೨೦೨೪

Share

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಜರುಗಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಎಸ್.ಎಸ್ ಅಧ್ಯಕ್ಷರಾದ ಕಲ್ಪೇಶ ಪೈ, ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಕ್ಷಣ ಕ್ಷೇತ್ರಕ್ಕೆ ಧಾನಿಗಳ ಕೊಡುಗೆಯ ಕುರಿತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಭಟ್ಕಳದ ವೈಟಲ್ ಅಲೈನ್ ನ ವೈದ್ಯೆ ಡಾ. ಧನ್ಯಾ ಪ್ರಭು ರವರು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ಜಿ.ಎಸ್.ಎಸ್ ಸಮಿತಿಯು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೊಂದಿರುವ ಕಾಳಜಿಯನ್ನು ಪ್ರಶಂಶಿಸುತ್ತಾ, ಮಾತನಾಡಿ ವಿದ್ಯಾರ್ಥಿಗಳ ಏಳ್ಗೆಗೆ ಪಾಲಕರ ಶ್ರಮ ಹಾಗೂ ಲಭ್ಯವಿರುವ ಪ್ರಚಲಿತ ಶೈಕ್ಷಣಿಕ ಕೋರ್ಸುಗಳ ಬಗ್ಗೆ, ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ವಿಫುಲ ಅವಕಾಶಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಮಹಿಳಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ರಜನಿ ಪ್ರಭು ರವರು ಮಾತನಾಡಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನಬೆಳೆಸಿ ಕೊಳ್ಳುವಂತೆ ತಿಳಿಸಿದರು.
ಗೌರವಾಧ್ಯಕ್ಷರಾದ ನರೇಂದ್ರ ನಾಯಕ ರವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಕೊಂಡಾಡುತ್ತಾ, ಧಾನಿಗಳ ಹಾಗೂ ಸಮಾಜ ಬಾಂಧವರ ಸಹಕಾರದಿಂದ ವರ್ಷಂಪ್ರತಿ ನೀಡಲಾಗುವ ಜಿ.ಎಸ್.ಬಿ ಸ್ಕಾಲರಶಿಪ್‌ಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಗೆ ತನು-ಮನ-ಧನ ಸಹಕಾರಕ್ಕೆ ಸಮಾಜವು ಸಧಾ-ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರಾಮು ಕಾಮತ, ಬಾಬಾನಂದ ಪೈ, ಪ್ರಸನ್ನ ಪ್ರಭು, ಸಮಿತಿಯ ಸದಸ್ಯರುಗಳಾದ ಅನೀಲ ಪೈ, ದೀಪಕ ನಾಯಕ, ವಿವೇಕ ಮಹಾಲೆ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು ಸಹಿತ ಪಾಲಕ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!