ಭಟ್ಕಳ: ಕಡವಿನಕಟ್ಟೆ ಹೊಳೆಯಲ್ಲಿ ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗುತ್ತಿದ್ದ ಯುವಕನ್ನು ರಕ್ಷಣೆ ಮಾಡಲು ತೆರಳಿದ ಮಹಿಳೆ ಸೇರಿ ಯುವಕನ್ನು ಕೂಡ ಸಾವನ್ನಪ್ಪಿರುವ ಘಟನೆ ಕಡವಿನಕಟ್ಟೆ ಸಮೀಪ ನಡೆದಿದೆ.
ಮೃತ ಮಹಿಳೆಯನ್ನು ಪಾರ್ವತಿ ಶಂಕರ ನಾಯ್ಕ ಹಾಗೂ ಯುವಕ ಸೂರಜ್ ಪಾಂಡು ನಾಯ್ಕ ಕಂಡೆಕೋಡ್ಲು ನಿವಾಸಿ ಎಂದು ತಿಳಿದು ಬಂದಿದೆ. ಇವರು ಐವರು ಸೇರಿಕೊಂಡು ಕಡವಿಕಟ್ಟೆ ಡ್ಯಾಂ ಸಮೀಪ ಸ್ವಲ್ಪ ದೂರದಲ್ಲಿ ಈಜಲು ತೆರಳಿದ್ದರು. ಹೊಳೆಯಲ್ಲಿ ಈಜುತ್ತಿರುವ ವೇಳೆ ಸೂರಜ್ ನೀರಿನಲ್ಲಿ ಮುಳುಗುತ್ತಿದ್ದನು ಗಮನಿಸಿದ ಪಾರ್ವತಿ ನಾಯ್ಕ ಈತನ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ದುರ್ದೈವ ಎಂಬಂತೆ ಈ ಮಹಿಳೆ ಕೂಡ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಸದ್ಯ ಇಬ್ಬರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ