ಜೆ ಇ ಮೈನ್ ಪರೀಕ್ಶೆ ಯಲ್ಲಿ ಉತ್ತಮ ಸಾಧನೆ – ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ಜೆ.ಇ.ಇ. ಮೇನ್ಸ್ ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಸಿಸಿದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿದ್ದಾರೆ.
ವಿದ್ಯಾರ್ಥಿಗಳಾದ ಸುಶಾಂತ್ 97%(ರ್ಯಾಂಕ್ 11009), ಸಂಜಿತ್ 95%,ನವ್ಯ 94.09%(ರ್ಯಾಂಕ್ 14859),ಆದರ್ಶ್ 93.71%,ಕವನ 91.89%,ವಿಘ್ನೇಶ್ ಪ್ರಭು 91.79%,ನಿತಿನ್ ಆರ್ 91.09%,ಶಿವಾನಿ ಶೇಟ್
90.48%,ಸತ್ಯಂ 89.66%,ದಿಶಾ 88.74% ಇವರುಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಗಳಿಸಿರುತ್ತಾರೆ.ಇವರ ಜೊತೆ ಇನ್ನೂ 25 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಗಳಿಸಿರುತ್ತಾರೆ.
ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ- ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.