ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಪುಣೆಯಲ್ಲಿ 9 ಸಾವಿರ ಹಿಂದೂಗಳ ಸಹಭಾಗದಲ್ಲಿ ‘ಸನಾತನ ಗೌರವ ಶೋಭಾಯಾತ್ರೆ’ ಸಂಪನ್ನ !
ಸನಾತನ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಲು ಸಾವಿರಾರು ಹಿಂದೂಗಳ ನಿರ್ಧಾರ !
ಶೋಭಾಯಾತ್ರೆ ಗಮನ ಸೆಳೆದ ಭಗವಾ ಧ್ವಜ, ತಾಳ-ಮೃದಂಗದೊಂದಿಗೆ ವಾರಕರಿ, ರಣರಾಗಿಣಿಯರ ಸ್ವಸಂರಕ್ಷಣಾ ಪ್ರಾತ್ಯಕ್ಷಿಕೆಗಳು, ಸಾಂಪ್ರದಾಯಿಕ ಉಡುಗೆ, ಒಂಬತ್ತು ಮೊಳ ಸೀರೆ ತೊಟ್ಟ ಮುತ್ತೈದೆಯರು !
ಪುಣೆ – ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ‘ಸನಾತನ ಧರ್ಮದ ಮೇಲೆ ಆಗುತ್ತಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಲು ಹಾಗೆಯೇ ಸನಾತನ ಧರ್ಮದ ಘನತೆಯನ್ನು ಹೆಚ್ಚಿಸಲು’ ಭಾನುವಾರ ಸಂಜೆ ಪುಣೆಯಲ್ಲಿ 9 ಸಾವಿರಕ್ಕೂ ಹೆಚ್ಚು ಹಿಂದೂಗಳು ಒಟ್ಟಾಗಿ ಸೇರಿ ‘ಸನಾತನ ಗೌರವ ಶೋಭಾಯಾತ್ರೆ’ ನಡೆಸಿದರು. ಇದರಲ್ಲಿ 20 ಕ್ಕೂ ಹೆಚ್ಚು ವಿವಿಧ ಸಂಪ್ರದಾಯ-ಸಂಘಟನೆಗಳು ಸಹಭಾಗಿ ಆಗಿದ್ದವು, ಪುಣೆ ನಗರದ ವಿವಿಧೆಡೆ ರಂಗೋಲಿ ಬಿಡಿಸಿ ಶೋಭಾಯಾತ್ರೆ ಮೇಲೆ ಹೂವಿನ ಸುರಿಮಳೆ ಮಾಡಿ ಗಣ್ಯರ ಹಸ್ತದಿಂದ ಸನ್ಮಾನಿಸಲಾಯಿತು.
ಆರಂಭದಲ್ಲಿ, ಪುಣೆಯ ‘ಶ್ರೀಮತಿ ಲಕ್ಷ್ಮೀಬಾಯಿ ದಗಡುಶೇಟ್ ಹಲ್ವಾಯಿ ದತ್ತ್ ಮಂದಿರ’ದ ಟ್ರಸ್ಟಿ ಶ್ರೀ. ರಾಜೇಂದ್ರ ಬಳಕವಡೆ ಮತ್ತು ‘ಶ್ರೀಮಂತ್ ದಗಡುಶೇಟ್ ಹಲ್ವಾಯಿ ಗಣಪತಿ ಟ್ರಸ್ಟ್’ ಉಪಾಧ್ಯಕ್ಷ ಶ್ರೀ. ಸುನಿಲ ರಾಸನೆ ಇವರ ಹಸ್ತದಿಂದ ಧರ್ಮಧ್ವಜದ ಪೂಜೆ ಮಾಡಿ ಭಿಕಾರದಾಸ್ ಮಾರುತಿ ಮಂದಿರದಿಂದ (ಮಹಾರಾಣಾ ಪ್ರತಾಪ್ ಉದ್ಯಾನದಿಂದ) ‘ಸನಾತನ ಗೌರವ ಶೋಭಾಯಾತ್ರೆ’ ಭಕ್ತಿಮಯ ವಾತಾವರಣದಲ್ಲಿ ಮತ್ತು ದೇವತೆಗಳ ಜಯ ಜಯಕಾರದಿಂದ ಪ್ರಾರಂಭವಾಯಿತು.
ಈ ಶೋಭಾಯಾತ್ರೆಯಲ್ಲಿ ಸನಾತನ ಸಂಸ್ಥೆಯ ಸದ್ಗುರು ಸ್ವಾತಿ ಖಾಡ್ಯೆ, ಪೂಜ್ಯ ಗಜಾನನ ಬಲವಂತ ಸಾಠೆ, ಪೂಜ್ಯ (ಸೌ.) ಸಂಗೀತಾ ಪಾಟೀಲ್ ಮತ್ತು ಪೂಜ್ಯ (ಸೌ.) ಮನೀಷಾ ಪಾಠಕ್ ಮುಂತಾದ ಸಂತರ ವಂದನೀಯ ಉಪಸ್ಥಿತಿಯಿತ್ತು. ಅಲ್ಲದೆ, ‘ಸ್ವಾತಂತ್ರ್ಯವೀರ ಸಾವರ್ಕರ್ ವಿಚಾರ ಮಂಚ್’ನ ಪ್ರಧಾನ ಕಾರ್ಯದರ್ಶಿ ಶ್ರೀ. ವಿದ್ಯಾಧರ ನರ್ಗೋಲ್ಕರ್, ‘ಮಹಾರಾಷ್ಟ್ರ ಗೋಸೇವಾ’ ಅಧ್ಯಕ್ಷ ಶ್ರೀ. ಶೇಖರ ಮುಂದಡಾ, ‘ಶ್ರೀ ಸಂಪ್ರದಾಯ’ದ ಅಧ್ಯಕ್ಷೆ ಸೌ. ಸುರೇಖಾ ಗಾಯಕವಾಡ, ಶ್ರೀ. ಗಾಯಕವಾಡ, ಪುಣೆಯ ‘ಪತಿತ್ ಪಾವನ್ ಸಂಘಟನೆಯ’ ಅಧ್ಯಕ್ಷ ಶ್ರೀ. ಸ್ವಪ್ನಿಲ್ ನಾಯಿಕ್ ಮತ್ತು ‘ಗ್ರಾಹಕ ಪೇಠೆ’ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ. ಸೂರ್ಯಕಾಂತ ಪಾಠಕ್, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಸಂಘಟಕರು ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯ ಸಮನ್ವಯಕರಾದ ಶ್ರೀ. ಸುನೀಲ್ ಘನವಟ ಉಪಸ್ಥಿತರಿದ್ದರು.
ಯಾತ್ರೆ ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು, ಸನಾತನ ಸಂಸ್ಥೆಯು ಕಳೆದ 25 ವರ್ಷಗಳಿಂದ ಸನಾತನ ಹಿಂದೂ ಧರ್ಮದ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿದೆ. ಸನಾತನ ಸಂಸ್ಥೆಯು ಸನಾತನ ಧರ್ಮ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಸೆಟೆದು ನಿಲ್ಲುವುದು, ಸನಾತನ ಧರ್ಮದ ಮೇಲಿನ ಆರೋಪಗಳನ್ನು ಖಂಡಿಸುವುದು, ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಧರ್ಮಾಚರಣೆಯನ್ನು ಮಾಡಲು ಪ್ರೇರೆಪಿಸುವುದು, ಎಲ್ಲರನ್ನು ಒಟ್ಟಾಗಿ ಸೇರಿಸಿ ಧಾರ್ಮಿಕ ಏಕತೆಗಾಗಿ ಹಾಗೂ ಧರ್ಮದ ರಕ್ಷಣೆಗಾಗಿ ಸತತವಾಗಿ ಕಾರ್ಯ ಮಾಡಿದೆ. ಇಂದು ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾಕ್ಕೆ ಹೋಲಿಸಿ ಧರ್ಮ ನಾಶದ ಬಗ್ಗೆ ಮಾತನಾಡುತ್ತಾರೆ, ಇದಕ್ಕಾಗಿ ವಿವಿಧ ಪರಿಷತ್ತುಗಳು ನಡೆಯುತ್ತಿವೆ. ಅದಕ್ಕೆ ಹಿಂದೂಗಳು ಸಂಘಟಿತರಾಗಿ ತಕ್ಕ ಉತ್ತರ ನೀಡಬೇಕು. ಇದಕ್ಕಾಗಿ ಸನಾತನ ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಹಿಂದೂಗಳು ಒಟ್ಟಿಗೆ ಸೇರಿ ‘ಸನಾತನ ಗೌರವ ಶೋಭಾಯಾತ್ರೆ’ಯನ್ನು ನಡೆಸಿದ್ದಾರೆ.’ ಎಂದು ಹೇಳಿದರು.
ದೇವರು ಮತ್ತು ಸಂತರ ಪಲ್ಲಕ್ಕಿಗಳೊಂದಿಗೆ 70 ಕ್ಕೂ ಹೆಚ್ಚು ತಂಡಗಳ ಸಹಭಾಗ !
ಶ್ರೀರಾಮನಾಮದ ಝೇಂಕಾರದಿಂದ ಹೊರಟ ಈ ಶೋಭಾಯಾತ್ರೆಯಲ್ಲಿ ಮಹಾರಾಷ್ಟ್ರದ ಕುಲದೇವತೆ ಶ್ರೀ ತುಳಜಾ ಭವಾನಿ ಮಾತೆ, ಶ್ರೀ ವಿಠ್ಠಲ-ರುಕ್ಮಿಣಿ ಮಾತೆ, ಶ್ರೀ ಭವಾನಿಮಾತೆ, ಶ್ರೀ ಖಂಡೋಬಾ-ಮಹಾಲ್ಸಾದೇವಿ, ಸಂತ ಸೋಪಾನದೇವ, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಭಾವಚಿತ್ರವಿರುವ ಮತ್ತು ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಒಂಬತ್ತು ಮೊಳ ಸೀರೆಯುಟ್ಟ ಮುತ್ತೈದೆಯರು, ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ವೇಷದಲ್ಲಿನ ಸಾಧಕರು, ಕಾರ್ಯಕರ್ತರು, ತುಳಸಿ ಹೊತ್ತ ಮಹಿಳೆಯರು, ಛತ್ರಪತಿ ಶಿವಾಜಿ ಮಹಾರಾಜರು, ಶಿವಾಜಿ ಮಹಾರಾಜರ ಮಾವಳೆಯರು, ಬಾಜಿ ಪ್ರಭು ದೇಶಪಾಂಡೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ವೇಷ ಧರಿಸಿದ ಮಕ್ಕಳು ಹಾಗೂ ‘ರಣರಾಗಿಣಿ’ ಶಾಖೆಯ ವತಿಯಿಂದ ಪ್ರದರ್ಶಿಸಲಾದ ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಗಳಾಗಿದ್ದವು. ಈ ಶೋಭಾಯಾತ್ರೆಯಲ್ಲಿ 70ಕ್ಕೂ ಹೆಚ್ಚು ತಂಡಗಳು, 20ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳು, ಸಂಘಟನೆಗಳು, ಸಂಪ್ರದಾಯಗಳು, ಮಂಡಳಿಗಳು, ದೇವಸ್ಥಾನಗಳ ಟ್ರಸ್ಟಿಗಳು ಭಾಗವಹಿಸಿದ್ದರು. ಶೋಭಾಯಾತ್ರೆಗೆ ತೆರಳುವ ಮಾರ್ಗದಲ್ಲಿ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಧರ್ಮಪ್ರೇಮಿ, ಸಮಾಜದ ವಿವಿಧ ಗೌರವಾನ್ವಿತರು, ಗಣ್ಯರ ಹಸ್ತದಿಂದ ಸ್ವಾಗತ ನೀಡಿ ಧರ್ಮಧ್ವಜ ಪೂಜೆ ಸಲ್ಲಿಸಲಾಯಿತು.
ಸ್ವಾತಂತ್ರ್ಯ ವೀರ ಸಾವರ್ಕರ್ ಸ್ಮಾರಕದ ಎದುರು ಸೌ. ವಿಮಲಾಬಾಯಿ ಗರವಾರೆ ಶಾಲೆಯ ಮೈದಾನದಲ್ಲಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು. ಅಂತಿಮವಾಗಿ ಪುಣೆಯ ಸನಾತನ ಸಂಸ್ಥೆಯ ಶ್ರೀ. ಚೈತನ್ಯ ತಾಗಡೆ ಇವರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.