‘ಗಾಝಾ’ಗಾಗಿ ಗೂಗಲ್ ಕಛೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 28 ‘ಗಾಜಾ ಪ್ರೇಮಿ’ ಉದ್ಯೋಗಿಗಳ ಅಮಾನತು !

Share

ಸನಾತನ ಸಂಸ್ಥೆಯ ಧಾರ್ಮಿಕ ವಿಷಯಕ್ಕೆ ಸಂಬಂಧಿತ ಆ್ಯಪ್ ಗಳನ್ನು ನಿಲ್ಲಿಸದರ ಹಿಂದೆ ‘ಗಾಝಾ’ದಂತಹ ಸಾಮ್ಯವಾದಿ ಮಾನಸಿಕತೆ; ತಪ್ಪಿತಸ್ಥರ ವಿರುದ್ಧ ಗೂಗಲ್ ಕ್ರಮ ಕೈಗೊಳ್ಳಲಿ ! – ಸನಾತನದ ಬೇಡಿಕೆ

ಇತ್ತೀಚೆಗಷ್ಟೇ ಗೂಗಲ್ ನ 28 ಉದ್ಯೋಗಿಗಳು ‘ಇಸ್ರೇಲ್ ಜೊತೆಗಿನ ಗೂಗಲ್ ಒಪ್ಪಂದವನ್ನು ರದ್ದುಗೊಳಿಸುವಂತೆ’ ಮುಷ್ಕರ ನಡೆಸಿ ಗೂಗಲ್ ಮೇಲೆಯೇ ಒತ್ತಡ ಹೇರಿದ್ದರು. ಈ ಪಕ್ಷಪಾತಿ ಉದ್ಯೋಗಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡು, ಗೂಗಲ್ ಸಂಸ್ಥೆಯು ಅವರಿಗೆ ದಾರಿ ತೋರಿಸಿದೆ. ಅತಿದೊಡ್ಡ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲಸಕ್ಕಿಂತ ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮತ್ತು ಕಮ್ಯುನಿಸ್ಟ್ ಅಜೆಂಡಾಗಳನ್ನು ನಿರ್ವಹಿಸಿದರೆ, ಅಂತಹ ಉದ್ಯೋಗಿಗಳಿಂದ ನ್ಯಾಯವನ್ನು ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ, ಕೆಲವು ತಿಂಗಳ ಹಿಂದೆ, ಧಾರ್ಮಿಕ ಪೂಜೆ, ಆರತಿ, ನಾಮಜಪ ಮತ್ತು ಜನಜಾಗೃತಿಗೆ ಸಂಬಂಧಿಸಿದ ಸನಾತನ ಸಂಸ್ಥೆಯ ಐದು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ-ಸ್ಟೋರ್ ತೆಗೆದುಹಾಕಿದೆ. ಇದರ ಹಿಂದೆ ‘ಗಾಝಾ’ದಂತಹ ಕಮ್ಯುನಿಸ್ಟ್ ಮನಸ್ಥಿತಿಯ ಕೈವಾಡವಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹಾಗಾಗಿ ಸನಾತನ ಸಂಸ್ಥೆಯ ಸಾಮಾಜಿಕ ಹಾಗೂ ರಾಷ್ಟ್ರಪ್ರೇಮಿ ಆ್ಯಪ್ ಗಳನ್ನು ಡಿಲೀಟ್ ಮಾಡುವ ಗೂಗಲ್ ಉದ್ಯೋಗಿಗಳ ವಿರುದ್ಧ ಗೂಗಲ್ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸನಾತನ ಸಂಸ್ಥೆ ಆಗ್ರಹಿಸಿದೆ.

ಗಾಝಾದಲ್ಲಿನ ಹಿಂಸಾಚಾರ ನಿಲ್ಲಿಸಲು ಅಥವಾ ಇಸ್ರೇಲ್‌ನೊಂದಿಗಿನ ಒಪ್ಪಂದದಿಂದ ಗಾಝಾದಲ್ಲಿ ಹಿಂಸಾಚಾರಕ್ಕೆ ಕೈಜೋಡಿಸಬಾರದು ಎಂದು ಈ ಸಿಬ್ಬಂದಿ ಆಂದೋಲನ ಮಾಡುತ್ತಿರುವಂತೆ ತೋರುತ್ತಿದ್ದರೂ, ಇದೇ ಸೂಕ್ಷ್ಮತೆಯು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸಾಚಾರದ ಸಮಯದಲ್ಲಿ ಎಲ್ಲಿ ಅಡಗಿತ್ತು ? ಅಷ್ಟೇ ಅಲ್ಲ, ಗಾಝಾ ಅಲ್ಲದೆ ಸುಡಾನ್, ಬಲೂಚಿಸ್ತಾನ್, ಅಫ್ಘಾನಿಸ್ತಾನ ಸೇರಿದಂತೆ ವಿಶ್ವದ ಹಲವೆಡೆ ಹಿಂಸಾಚಾರ ನಡೆಯುತ್ತಿದೆ. ಹಲವೆಡೆ ಮಾನವೀಯತೆ ನಾಶವಾಗುತ್ತಿದೆ. ಈ ಕುರಿತು ಗೂಗಲ್‌ನ ಮಾನವತಾವಾದಿ ಸಿಬ್ಬಂದಿಗಳಿಗೆ ಆಂದೋಲನ ಮಾಡಬೇಕು ಎಂದು ಏಕೆ ಅನಿಸುವುದಿಲ್ಲ ? ಒಟ್ಟಾರೆಯಾಗಿ, ಇಸ್ರೇಲ್ ಕಾರಣದಿಂದ ಪಕ್ಷಪಾತ ಮತ್ತು ಏಕಪಕ್ಷೀಯ ನಿಲುವು ಹೊಂದಿರುವ ಸಿಬ್ಬಂದಿಗಳು ಬೆಳಕಿಗೆ ಬಂದಿದ್ದಾರೆ.

ಈ ಮಧ್ಯೆ ಸನಾತನ ಸಂಸ್ಥೆಯ ಐದು ಅಪ್ಲಿಕೇಶನ್ ಗಳಾದ ‘ಸನಾತನ ಚೈತನ್ಯವಾಣಿ’, ‘ಗಣೇಶ್ ಪೂಜೆ ಮತ್ತು ಆರತಿ’, ‘ಶ್ರಾದ್ಧಾ ವಿಧಿ’, ‘ಸರ್ವೈವಲ್ ಗೈಡ್’ (ತುರ್ತು ಪರಿಸ್ಥಿತಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಮಾಡಬೇಕೆಂಬುದರ ಬಗ್ಗೆ ಮಾರ್ಗದರ್ಶಿ) ಮತ್ತು ‘ಸನಾತನ ಸಂಸ್ಥೆ’, ಈ ಆ್ಯಪ್ ಗಳನ್ನು ಯಾವುದೇ ಪೂರ್ವ ಸೂಚನೆಯಿಲ್ಲದೆ Google Play-Store ನಿಂದ ತೆಗೆದುಹಾಕಲಾಗಿದೆ.

ಸರ್ವಾಧಿಕಾರಯಂತೆ ವರ್ತಿಸುವ ಗೂಗಲ್ ನ ‘ಗಾಝಾ’ ಮಾನಸಿಕತೆಯ ಉದ್ಯೋಗಿಗಳು ಈ ನಡುವೆ ‘Bharat Matromony’, ‘Shadi.com’, ‘Naukri.com’, ’99 Acres.com’ ಮುಂತಾದ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿದ್ದರು; ತೀವ್ರ ವಿರೋಧದ ನಂತರ, ಅವುಗಳನ್ನು ಮತ್ತೆ ಪ್ಲೇ-ಸ್ಟೋರ್‌ನಲ್ಲಿ ಸೇರಿಸಲಾಯಿತು. ಸಾವಿರಾರು ಜನರಿಗೆ ಪ್ರಿಯವಾಗಿದ್ದ ಸನಾತನ ಸಂಸ್ಥೆಯ ಸಾಮಾಜಿಕ ಮತ್ತು ರಾಷ್ಟ್ರಹಿತಕಾರಿ ಆ್ಯಪ್ ಗಳನ್ನು ಪುನಃ ಗೂಗಲ್ ಪ್ಲೇ-ಸ್ಟೋರ್‌ನಲ್ಲಿ ಇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!