ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ಝಕಾತ್ ನ ಅಕ್ಕಿಯನ್ನು ಭಟ್ಕಳದ ಸಂಟ್ರಲ್ ಫಿತ್ರ್ ಕಮಿಟಿ ಭಟ್ಕಳದ ವಿವಿಧ ಕ್ರೀಡಾ ಸಂಘಗಳ ಸಹಕಾರದೊಂದಿಗೆ ಸಂಗ್ರಹಿಸಿ ಬಡವರಲ್ಲಿ ಹಂಚುವ ವ್ಯವಸ್ಥೆ ಮಾಡಿದ್ದು ಈ ವರ್ಷ ಭಟ್ಕಳದಲ್ಲಿ 120,000 ಕ್ಕೂ ಹೆಚ್ಚು ಕಿಲೋ ಅಕ್ಕಿಯನ್ನು ಈದ್-ಉಲ್-ಫಿತರ್ ರಾತ್ರಿ ವಿತರಿಸಲಾಯಿತು ಎಂದು ಕಮಿಟಿಯ ಸಂಚಾಲಕ ಮೌಲಾನ್ ಮುಹಮ್ಮದ್ ಇಲಿಯಾಸ್ ನದ್ವಿ ತಿಳಿಸಿದರು.
ಅವರು ಇಲ್ಲಿ ಹುದಾ ಮಸೀದಿಯಲ್ಲಿ ಫಿತ್ರ್ ಕಮಿಟಿಯ ಪರಿಶೀಲನಾ ಸಭೆಯಲ್ಲಿ ಫಿತ್ರ್ ಝಕಾತ್ ಕುರಿತಂತೆ ಮಾಹಿತಿ ನೀಡಿ ಮಾತನಾಡಿದರು.
ಶಿರೂರಿನಿಂದ ಕುಮಟಾ ವರೆಗೆ ಸುಮಾರು 2009 ಕುಟುಂಬಗಳಿಗೆ ತಲಾ 50kg ಯಂತೆ ಒಟ್ಟು 120 ಕ್ಕೂ ಹೆಚ್ಚು ಕಿಂಟ್ವಲ್ ಬಾಸ್ಮತಿ ಅಕ್ಕಿಯನ್ನು ವಿತರಿಸಲಾಯಿತು. ಈ ವರ್ಷವೂ ಎಲ್ಲ ಕ್ಷೇತ್ರಗಳಲ್ಲಿ ಹೊಸ ಸಮೀಕ್ಷೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ರಂಜಾನ್ ತಿಂಗಳಿನಲ್ಲಿ ಫಿತ್ರಾ ಸಮಿತಿಯ ಎರಡು ಸಲಹಾ ಸಭೆಗಳನ್ನು ನಡೆಸಲಾಗಿದ್ದು, ಪ್ರತಿ ಬಾರಿಯೂ ಪ್ರಗತಿಯಲ್ಲಿದೆ ಗಲ್ಫ್‌ನಲ್ಲಿ ವಾಸಿಸುವ ಭಟ್ಕಳ ಜಮಾತ್‌ಗಳು ಮತ್ತು ವಿವಿಧ ನೆರೆಹೊರೆಗಳ ಯುವಕರು ಮತ್ತು ಕ್ರೀಡಾ ಕೇಂದ್ರಗಳ ಬೆಂಬಲ ಮತ್ತು ಸ್ಥಳೀಯ ವಿದ್ವಾಂಸರು ಮತ್ತು ಯುವಕರ ವಿಶೇಷ ಆಸಕ್ತಿಯನ್ನು ವಹಿಸಿದ್ದರು ಎಂದರು.
ಸಮಿತಿಯ ಉಪ ಸಂಚಾಲಕ ಎಸ್.ಎಂ.ಪರ್ವೇಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.. ಜಮಾಅತ್ ಮುಸ್ಲಿಮಿನ್ ಭಟ್ಕಳದ ಅಧ್ಯಕ್ಷ ಶಾಬಂದ್ರಿ ಮಹಮ್ಮದ್ ಶಾಫಿ ಅಧ್ಯಕ್ಷತೆ ವಹಿಸಿದ್ದರು.
ಜಾಮಿಯ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಮೌಲಾನಾ ಮಕ್ಬೂಲ್ ಅಹ್ಮದ್ ಸಾಹಿಬ್ ಕೊಬಟ್ಟೆ ನದ್ವಿ, ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ತಂಝೀಮ್ ಉಪಾಧ್ಯಕ್ಷ ಉದ್ಯಮಿ ಅತೀಕುರ್ ರಹಮಾನ್ ಮುನಿರಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಎಂಜೆ ನದ್ವಿ, ಜಿದ್ದಾ ಜಮಾಆತ್ ಅಧ್ಯಕ್ಷ ಕಮರ್ ಸಾದಾ , ದುಬೈ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷ ಇಮ್ರಾನ್ ಖತೀಬ್ ಮತ್ತು ಮೌಲಾನಾ ಯೂನಸ್ ಬರ್ಮಾವರ್ ನದ್ವಿ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.