ಮುರುಡೇಶ್ವರದ ನೇತ್ರಾಣಿ ದ್ವಿಪದ ಬಳಿ ಉದ್ಯಮ ನಡೆಸುತ್ತಿರುವ ನೇತ್ರಾಣಿ ಅಡ್ವಂಚರ್ಸ್ ಮಾಲಿಕ ಗಣೇಶ್ ಹರಿಕಾಂತ್ ಮೇಲೆ ಅತ್ಯಾಚಾರದ ಕೇಸು ದಾಖಲಾಗಿದ್ದು. ಇದರ ಹಿಂದೆ ಸಚಿವ ಮಂಕಾಳ್ ವೈದ್ಯರ ಹೆಸರು ಕೇಳಿ ಬಂದಿದೆ. ಸಚಿವರು ಬೇಡಿಕೆ ಇಟ್ಟ ಎರಡು ಕೋಟಿ ರೂ ಹಣಗಳನ್ನು ಕೊಡದ ಹಿನ್ನಲೆಯಲ್ಲಿ ತಮ್ಮ ವಿರುದ್ಧ ಮಾಡಿದ ಷಡ್ಯಂತರವಾಗಿದೆ ಎಂದು ಉದ್ಯಮಿ ಗಣೇಶ್ ಅವರ ಪತ್ನಿ ಗೌತಮಿ ಗಣೇಶ್ ಆರೋಪ ಮಾಡಿದ್ದಾರೆ.
ಸಚಿವ ಮಂಕಾಳ್ ವೈದ್ಯ ಅವರು ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಗಣೇಶ್ ಹರಿಕಾಂತ್ ಅವರಿಂದ ಎರಡು ಕೋಟಿ ಹಣ ಬೇಡಿಕೆ ಇಟ್ಟಿದ್ದೀರಿ ಎಂಬ ಆರೋಪ ಕೇಳಿ ಬಂದಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮಾಧ್ಯಮದವರೇ ಎರಡು ಕೋಟಿ ರೂಗೆ ಗಣೇಶ್ ಅವರ ಬಳಿ ಡೀಲ್ ಆಗಿದ್ದಾರೆ ಎಂದು ಗೊಣಗುತ್ತ ಸಚಿವ ಮಂಕಾಳ್ ವೈದ್ಯ ಪತ್ರಿಕಾ ಭವನದಿಂದ ಹೊರ ನಡೆದರು.
ಕಳೆದ ಎರಡು ವರ್ಷದಿಂದ ಗಣೇಶ್ ಹರಿಕಾಂತ್ ಅವರ ಮನೆ ಕೆಲಸಕ್ಕೆ ಬರುತ್ತಿದ್ದ ಯುವತಿ ಏಪ್ರಿಲ್ ಏಳರಂದು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದಕ್ಕೆ ಕಾರಣ ಉದ್ಯಮಿ ಗಣೇಶ್ ಹರಿಕಾಂತ್ ಎಂದು ಹೇಳಿ ಅವರ ಮೇಲೆ ದೂರು ದಾಖಲಾಗಿತ್ತು. ಪೊಲೀಸರು ಗಣೇಶ್ ಹರಿಕಾಂತ್ ಅವರನ್ನ ಬಂಧಿಸಿದ್ದರು.
ಇನ್ನೂ ಈ ಪ್ರಕರಣದ ಬಗ್ಗೆ ಉದ್ಯಮಿ ಗಣೇಶ್ ಹರಿಕಾಂತ್ ಅವರ ಪತ್ನಿ ಮಾಧ್ಯಮಗಳೊಂದಿಗೆ ಮಾತನಾಡಿ ನೇತ್ರಾಣಿ ದ್ವೀಪದ ಬಳಿ ಅಡ್ವಂಚರ್ಸ್ ಟೆಂಡರ್ ನವೀಕರಣ ಮಾಡಲು ಸಚಿವರು ಎರಡು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಹಣ ಕೊಡದ ಹಿನ್ನೆಲೆಯಲ್ಲಿ ನನ್ನ ಪತಿಯ ಮೇಲೆ ಯುವತಿಯನ್ನು ಬಳಸಿಕೊಂಡು ಅತ್ಯಾಚಾರದ ಕೇಸ್ ಸಚಿವರು ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಉದ್ಯಮಿ ಗಣೇಶ್ ಹರಿಕಾಂತ್ ಅವರು ತಾವು ಅತ್ಯಾಚಾರ ಮಾಡಿಲ್ಲ ಬೇಕಾದರೆ ಮಗುವಿನ ಮತ್ತು ನನ್ನ ಡಿಎನ್ಎ ಪರೀಕ್ಷೆ ಮಾಡುವಂತೆ ಒತ್ತಾಯಿಸಿದ್ದಾರೆ.
ಆದರೆ ಹೀಗೆಲ್ಲಾ ಆರೋಪ ಕೇಳಿ ಬಂದರು ಸಚಿವರು ಮಾತ್ರ ಮಾಧ್ಯಮದವರ ಮೇಲೆ ಗೂಬೆಕೂರಿಸುವುದು ಎಷ್ಟು ಸರಿ?
ಲೋಕಸಭಾ ಚುನಾವಣೆ ಸಮಯದಲ್ಲಿ ಇಂತಹ ರಾಧಾಂತ ಬೇಕಿತ್ತಾ ಸಚಿವರೆ?
ಮೊದಲಿನಿಂದಲೂ ಸಾರ್ವಜನಿಕ ವಲಯದಲ್ಲಿ ಸಚಿವರು ತಮ್ಮ ವಿರೋಧಿಗಳ ವಿರುದ್ಧ ಕೇಸುಗಳನ್ನು ಹಾಕಿಸುತ್ತಾರೆ ಎಂದು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಇದಕ್ಕೆಲ್ಲಾ ಪುಷ್ಟಿಕೊಡುವಂತೆ ಇಂಥ ಸುದ್ದಿಗಳು ಬಂದರೆ ಚುನಾವಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ನಿಮ್ಮ ವಿರೋಧಿಗಳ ವಿರುದ್ಧ ಕೇಸ್ ಮಾಡುವುದರ ಮೂಲಕ ಮಟ್ಟ ಹಾಕುತ್ತೇವೆ ಎಂದುಕೊಂಡರೆ ಅದು ಅಸಾಧ್ಯದ ಮಾತು.
ಅದು ನಿಮ್ಮ ರಾಜಕೀಯ ಜೀವನದ ಅಂತ್ಯಕ್ಕೆ ಕಾರಣವಾಗಬಹುದು. ಯಾಕೆಂದರೆ ಭಟ್ಕಳ ರಾಜಕೀಯದ ಇತಿಹಾಸವನ್ನು ಒಮ್ಮೆ ಅವಲೋಕಿಸಿ ನೋಡಿ.
ಇನ್ನಾದರೂ ಎಚ್ಚೆತ್ತುಕೊಳ್ಳಿ ಸಚಿವರೇ.