ಭಟ್ಕಳದ ಜೀವನದಿಯಾಗಿರುವ ಸರಾಬಿ ನದಿ ಅವಸಾನದ ಅಂಚಿನಲ್ಲಿದೆ. ಒಂದು
ಕಾಲದಲ್ಲಿ ಗತವೈಭವನ್ನು ಮೆರೆದ ಈ ನದಿ ಈಗ ಒಳಚರಂಡಿ ನೀರು ಶೇಖರಣಾ ಘಟಕವಾಗಿ ಮಾರ್ಪಟ್ಟಿದ್ದು
ಈ ಭಾಗದ ಜನರ ಜೀವನಕ್ಕೆ ಕುತ್ತನ್ನು ತಂದೆರಗಿದೆ. ಇದಕ್ಕೆ ಮುಖ್ಯ ಕಾರಣ ಗೌಸಿಯಾ ಸ್ಟ್ರೀಟ್ ನಲ್ಲಿ
ನಿರ್ಮಾಣವಾಗಿರುವ ಒಳಚರಂಡಿ ಘಟಕ. ಇದರಿಂದಾಗಿ ಸರಾಬಿ ನದಿಗೆ ನಿರಂತರವಾಗಿ ಕಲುಷಿತ ನೀರು
ಶೇಖರಣೆಗೊಳ್ಳುತ್ತಿದೆ. ಆದ್ದರಿಂದ ಸರಾಬಿ ನದಿಯನ್ನು ಸ್ವಚ್ಚಗೊಳಿಸುವುದರೊಂದಿಗೆ ನದಿ ಕಲುಷಿತಗೊಳ್ಳಲು
ಮೂಲಕ ಕಾರಣವಾಗಿರುವ ಒಳಚರಂಡಿ ಸಂಸ್ಕರಣ ಘಟಕವನ್ನು ಕೂಡಲೇ ಸ್ಥಳಾಂತರಿಸಿ ಈ ಭಾಗದ ಜನರಿಗೆ
ನೆಮ್ಮದಿಂi ÀÄ ಬದುಕು ಬದುಕಲು ಅವಕಾಶ ಮಾಡಿಕೊಡಬೇಕೆಂದು, ಭಟ್ಕಳದ ಜನರ ಜೀವನದಿಯಾಗಿರುವ ಸರಾಬಿ ಹೊಳೆ ಈಗ ಸಂಪೂರ್ಣವಾಗಿ ಹೂಳು ತುಂಬಿ ಬತ್ತಿಹೋಗಿದ್ದು ಕಸಕಡ್ಡಿ ಕೆಸರು ತುಂಬಿ ಕಲುಷಿತಗೊಂಡಿದೆ. ಇದರಿಂದಾಗಿ ಮಳೆಗಾಲದಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿ ಹೊಳೆ ದಂಡೆಯ ನಿವಾಸಿಗಳಲ್ಲಿಆತಂಕದ ಸ್ಥಿತಿ ಉಂಟಾಗಿದೆ. ಮನೆಗಳಲ್ಲಿ ನೀರು ತುಂಬಿ ದಿನಬಳಕೆಯ ವಸ್ತುಗಳು, ಆಹಾರಪದಾರ್ಥಗಳು ಹೊಳೆಪಾಲಾಗುತ್ತಿವೆ. ಹೀಗೆ ಪ್ರತಿವರ್ಷ ಲಕ್ಷಾಂತರ ರೂ ನಷ್ಟವನ್ನು ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವಾಗಿ ಹೊಳೆಯಲ್ಲಿ ತುಂಬಿಕೊAಡಿರುವ ಹೂಳನ್ನು ತೆಗೆಯುವುದರ ಮೂಲಕ ಜನರನ್ನು ಸಂಕಷ್ಟದಿAದ ಪಾರು ಮಾಡಬಹುದಾಗಿದೆ. ಕಳೆದ ವರ್ಷ ಬಿದ್ದ ಮಳೆಯು ಸರಾಬಿ ಹೊಳೆಯ ಅಕ್ಕಪಕ್ಕ ವಾಸಿಸುವ ನಿವಾಸಿಗಳಿಗೆ ಮಾರಣಾಂತಿಕವಾಗಿ ಪರಿಣಮಿಸಿದ್ದು, ಹತ್ತಾರು ಮನೆಗಳು ಬಿದ್ದು ಹೋಗಿವೆ. ಅಲ್ಲದೆ ನೂರಾರು ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಗ್ರಹೋಪಯೋಗಿ ವಸ್ತುಗಳಾದ ಫ್ರಿಜ್, ವಾಷಿಂಗ್ ಮಷಿನ್, ನೀರಿನ ಮೋಟಾರು, ಇನ್ರ‍್ಟರ್ ಇತರೆ ಬೆಲೆಬಾಳುವ ವಸ್ತುಗಳು ಹಾಳಾಗಿ ತುಂಬಾ ನಷ್ಟವನ್ನು ಅನುಭವಿಸುವಂತೆ ಮಾಡಿದೆ. ಕಾರಣ ತಾವು ಕೂಡಲೆ ಸರಾಬಿ ಹೊಳೆಯಲ್ಲಿ ಶೇಖರಣೆಗೊಂಡಿರುವ ಹೂಳನ್ನು ತೆಗೆಯುವ ಕ್ರಮಕ್ಕೆ ಮುಂದಾಗಬೇಕು ಮತ್ತು ಈ ನದಿಯ ಗತವೈಭವವನ್ನು ಮರಳಿ ತರುವಲ್ಲಿ ತಾವು ಪ್ರಯತ್ನಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಸರಾಬಿ ನದಿ ಹೋರಾಟ ಸಮಿತಿ ಭಟ್ಕಳ ಸರಾಬಿ ನದಿಯು ಕಲುಷಿತಗೊಂಡು ಈ ಭಾಗದ ಗೌಸೀಯ ಸ್ಟ್ರೀಟ್, ತಕಿಯಾ ಸ್ಟ್ರೀಟ್, ಡಾರಂಟ, ಚೌಥನಿ, ಫಾರೂಖಿ ಸ್ಟ್ರೀಟ್ , ಜಾಮಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಬೆಳ್ನಿ, ಮುಂಡಳ್ಳಿ, ಆಸರಕೇರಿಗಳ ನಿವಾಸಿಗರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಇಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು ನಾಲ್ಕೆöÊದು ಸಾವುಗಳು ಕೂಡ ಸಂಭವಿಸಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಸರಾಬಿ ನದಿಯ ಸ್ವಚ್ಚತೆ ಕಾಪಾಡುವುದು ಮತ್ತು ಅದರಲ್ಲಿ ತುಂಬಿದ ಹೂಳನ್ನು ತೆಗೆಯುವುದು ಸಾರ್ವಜನಿಕರು ಸೇರಿದಂತೆ ಸರ್ಕಾರದ ಆದ್ಯ ಕರ್ತವ್ಯವೂ ಆಗಿದೆ ಎಂದು ನಾವು ನಂಬಿದ್ದೇವೆ.
ಸರಾಬಿ ನದಿಯ ಅವಸಾನ ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ನದಿಯನ್ನು ಪುರ್ನಜೀವನಗೊಳಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಅಲ್ಲದೆ
ಶಮ್ಸುದ್ದೀನ್ ವೃತ್ತದ ಬಳಿಯಿಂದ ಈ ಸರಾಬಿ ನದಿಗೆ ಒಳಚರಂಡಿ ಪೈಪನ್ನು ಅಳವಡಿಸುತ್ತಿರುವ ಬಗ್ಗೆ
ಮಾಹಿತಿ ಇದ್ದು ಇದನ್ನೂ ಸರಾಬಿ ನದಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಸರಾಬಿ
ನದಿಯನ್ನು ಕಲುಷಿತಗೊಳಿಸುವ ಯಾವುದೇ ಇಂತಹ ಕಾರ್ಯವನ್ನು ಹೋರಾಟ ಸಮಿತಿ ಸಹಿಸುವುದಿಲ್ಲ ಎಂಬ
ಎಚ್ಚರಿಕೆಯನ್ನು ನೀಡುತ್ತದೆ ಎಂದು ಈ ಮೂಲಕ ತಮಗೆ ತಿಳಿಯಪಡಿಸುತ್ತಿದ್ದೇವೆ.
ಕಾರಣ ತಾವು ಕೂಡಲೇ ಕಾರ್ಯಪ್ರವೃತ್ತಗೊಂಡು ಸರಾಬಿ ನದಿಯನ್ನು ಸ್ವಚ್ಚಗೊಳಿಸುವುದು, ಅದರಲ್ಲಿ
ತುಂಬಿಕೊAಡಿರುವ ಹೂಳನ್ನು ತೆಗೆಯುವುದು ಮತ್ತು ನದಿ ಕಲುಷಿತಗೊಳ್ಳಲು ಕಾರಣವಾಗಿರುವ ಗೌಸಿಯಾ ಸ್ಟ್ರೀಟ್
ಒಳಚರಂಡಿ ಸಂಸ್ಕರಣ ಘಟಕವನ್ನು ಕೂಡಲೇ ಸ್ಥಳಾಂತರಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು
ಆದಷ್ಟು ಬೇಗನೆ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ತಾವು ಕಾರ್ಯಪ್ರವೃತ್ತರಾಗುತ್ತೀರೆಂಬ ವಿಶ್ವಾಸ ನಮಗಿದೆ ಎಂದು ಸಹಾಯಕ ಆಯುಕ್ತರಿಗೆ ಸರಾಬಿ ನದಿ ಉಳಿಸಿ ಹೋರಾಟ ಸಮಿತಿ ಭಟ್ಕಳ ಇವರು ಮನವಿ ನೀಡಿದರು.