ಕರಿಕಲ್ ದ್ಯಾನ ಮಂದಿರದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ

Share

ಭಟ್ಕಳ: ಇಲ್ಲಿನ ಕರಿಕಲ್ ದ್ಯಾನ ಮಂದಿರದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಮಾರ್ಚ ೪ ಸೋಮವಾರದಂದು
ನಡೆಯಲಿದೆ. ಈ ಕುರಿತು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಗುರುವಾರ ಬೆಳಿಗ್ಗೆ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾದಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕರಿಕಲ್ ಧ್ಯಾನ ಕುಟೀರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವವು ಜರುಗಲಿದೆ. ಅಂದು ಲೋಕಕಲ್ಯಾಣ್ಕಾಗಿ ಶ್ರೀ ರಾಮ ತಾರಕ ಮಹಾಯಜ್ಞ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು . ಎಲ್ಲ ಭಕ್ತಾಭಿಮಾನಿಗಳು ಬಂಧುಗಳು ಸಕುಟುಂಬಿಕರಾಗಿ ಕ್ಷೇತ್ರಕ್ಕೆ ಬಂದು ಶ್ರೀರಾಮ ಚಂದ್ರ ದೇವರ ಕೃಪೆಗೆ ಪಾತ್ರರಾಗಿ ಪೂಜ್ಯ ಶ್ರೀಗಳಿಂದ ಮಂತ್ರಾಕ್ಷೆತೆ ಪಡೆದು ಪುನೀತರಾಗಬೆಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಮಧಾರಿ ಗುರುಮಠದ ಗೌರವಾಧ್ಯಕ್ಷರಾದ ಕೃಷ್ಣ ನಾಯ್ಕ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಧ್ಯಾನ ಮಂದಿರದ ವರ್ಧಂತಿ ಉತ್ಸವ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನಮಧಾರಿ ಗುರುಮಠದ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ್‌ಕುಮಾರ್, ಉಪಾದ್ಯಕ್ಷ ಎಂ.ಕೆ.ನಾಯ್ಕ, ಸದಸ್ಯರಾದ ಕೆ.ಆರ್. ನಾಯ್ಕ,ಮಹೇಶ ನಾಯ್ಕ, ಶ್ರೀಧರ ನಾಯ್ಕ, ವಿಠ್ಠಲ್ ನಾಯ್ಕ, ವಿನಾಯಕ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ಗುರುಮಠದ ಕಾರ್ಯದರ್ಶಿ ಡಿ.ಎಲ್. ನಾಯ್ಕ ಎಲ್ಲರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!