ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ತಪ್ಪಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡಂತೆ

Share

ಉತ್ತರ ಕನ್ನಡ ಜಿಲ್ಲಾ ನಾಯಕರಿಗೆ ಅನಂತ್ ಕುಮಾರ್ ಹೆಗಡೆಯವರನ್ನ ವಿರೋಧಿಸುವ ಶಕ್ತಿ ಇದೆಯ. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಕಾವು ರಂಗೇರುತಿದೆ ದಿನಕ್ಕೆ ಒಬ್ಬರಂತೆ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ. ದೇಶ ಒಡೆಯುವ ಕೂಗು ಒಬ್ಬರದಾದರೆ ನಮ್ಮ ತೆರಿಗೆ ನಮ್ಮ ಹಕ್ಕು ಇನ್ನೊಬ್ಬರದು, ಮನೆಮನೆಗೆ ಹನುಮಧ್ವಜ ಹಾರಿಸುತ್ತೇವೆ ಎನ್ನುವ ಮತ್ತೊಬ್ಬರದು. ಈ ಎಲ್ಲಾ ಕೂಗಿಗೆ ಕಾರಣ ಏನೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಎನ್ನುವುದಾದರೂ, ಕರ್ನಾಟಕದಲ್ಲಿ ಮಾತ್ರ ಬೆಂಕಿಗೆ ತುಪ್ಪ ಸುರಿದಂಗೆ ಮಾಡಿದ್ದು ಮಾತ್ರ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಆ ಒಂದು ಹೇಳಿಕೆ ಕರ್ನಾಟಕದ ರಾಜಕೀಯ ಬುಡವನ್ನೇ ಅಲ್ಲಾಡಿಸಿದ್ದು ಮಾತ್ರವಲ್ಲದೆ ಕರ್ನಾಟಕದ ಜನರು ತಮ್ಮ ಪೂರ್ವಿಕರನ್ನು ಮತ್ತೆ ನೆನಪು ಮಾಡಿಕೊಳ್ಳುವ ಹಾಗೆ ಮಾಡಿದರು. ಹಾಗಾದರೆ ಅನಂತ್ ಕುಮಾರ್ ಹೆಗಡೆ ಹೇಳಿದ ಆ ಹೇಳಿಕೆ ಯಾವುದು ನೋಡೋಣ ಸಾವಿರಾರು ವರುಷದ ಋಣ ಹಿಂದುಗಳ ಮೇಲಿದೆ ಋಣ ತೀರಿಸುವುದು ಹಿಂದುಗಳ ಗುಣ, ತೀರಿಸಿದಿದ್ದರೆ ಅದು ಹಿಂದೂ ರಕ್ತವೇ ಅಲ್ಲ ಎಂದಿದ್ದರು. ಭಟ್ಕಳದ ಚಿನ್ನದಪಳ್ಳಿ, ಸಿರಸಿಯ ಮಸೀದಿ ಹಾಗೂ ಮಂಡ್ಯದ ಮಸೀದಿ ಹೀಗೆ ನೂರಾರು ಮಸೀದಿಗಳು ಹಿಂದೂ ದೇವಾಲಯಗಳನ್ನು ಒಡೆದು ನಿರ್ಮಿಸಲಾಗಿದೆ. ಈಗ ಅಲ್ಲಿ ಮತ್ತೆ ದೇವಾಲಯಗಳನ್ನು ನಿರ್ಮಾಣ ಮಾಡುವುದು ಹಿಂದುಗಳ ಸಂಕಲ್ಪವಾಗಿದೆ, ಇದು ಅನಂತ್ ಕುಮಾರ್ ಹೆಗಡೆಯವರ ಹೇಳಿಕೆಯಲ್ಲ ಹಿಂದೂ ಸಮಾಜ ಹಿಂದೂ ಸಮಾಜದ ಹೇಳಿಕೆ, ರಣಭೈರವ ಎದ್ದಾಗಿದೆ ಇನ್ನು ಕೂರುವ ಮಾತೇ ಇಲ್ಲ ಎಂದು ಹೇಳಿದ್ದರು. ಇದೊಂದು ಹೇಳಿಕೆ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು, ರಾಜಕೀಯ ನಾಯಕರಿಗೆ ಒಮ್ಮೆಲೆ ಸಿಡಿಲು ಬಡಿದಂತಾಗಿ ಮೈ ಪರಚಿಕೊಳ್ಳುವಂತೆ ಮಾಡಿತ್ತು. ಅನಂತ್ ಕುಮಾರ್ ಹೆಗಡೆ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಮಾತನಾಡಿದ್ದು ಇದು ರಾಜ್ಯ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿತ್ತು. ಕಾಂಗ್ರೆಸ್ ನಾಯಕರು ಸಂಸದ ಅನಂತ್ ಕುಮಾರ್ ಹೆಗಡೆಯವರನ್ನು ಕಟುವಾಗಿ ಟೀಕಿಸಿದರು. ಅನಂತ್ ಕುಮಾರ್ ಹೆಗಡೆಯವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಮುಖಂಡರು ಅಬ್ಬರಿಸಿದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಯಾವ ಕಾಂಗ್ರೆಸ್ ಮುಖಂಡರು, ಶಾಸಕರು, ಉಸ್ತುವಾರಿ ಮಂತ್ರಿಗಳು ಸಂಸದರ ಹೇಳಿಕೆಗೆ ಖಂಡಿಸುವ ಅಥವಾ ಟೀಕಿಸುವ ಸಾಹಸ ಮಾಡಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಕಾಂಗ್ರೆಸ್ ಶಾಸಕರಿದ್ದರೂ ತಮ್ಮ ಪಕ್ಷದ ನಾಯಕ ತಮ್ಮ ಸರಕಾರದ ಮುಖ್ಯಮಂತ್ರಿಯನ್ನು ಏಕವಚನದಿಂದ ಸಂಭೋಧಿಸಿದರು ಈ ಹೇಳಿಕೆಗೂ ನಮಗೂ ಯಾವ ಸಂಬಂಧವೂ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದರು. ಇದಕ್ಕೆ ಕಾರಣ ಅನಂತ್ ಕುಮಾರ್ ಹೆಗಡೆಯವರ ಭಯ, ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾರ ಯಾರು ಎಲ್ಲಿ ಶಾಸಕರಾಗಬೇಕು ಎನ್ನುವ ನಿರ್ಧಾರ ಚುನಾವಣೆಗೂ ಒಂದು ವರ್ಷ ಮೊದಲೇ ಇರುವಾಗ ಸಂಸದ ಅನಂತ್ ಕುಮಾರ್ ಹೆಗಡೆಯವರು ನಿರ್ಧರಿಸುತ್ತಾರೆ ಎನ್ನುವ ಆಪಾದನೆಯೂ ಕೂಡ ಇದೆ , ಜಿಲ್ಲೆಯ ಬಿಜೆಪಿ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳು ಶಾಸಕರಾಗುವುದು ಅನಂತ್ ಕುಮಾರ್ ಹೆಗಡೆಯವರ ಕೃಪಾಕಟಾಕ್ಷದಿಂದಲೇ ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನತೆ ತಿಳಿದಿರುವ ಸತ್ಯ. ಹೀಗಾಗಿ ಕಾಂಗ್ರೆಸ್ಸಿನ ಶಾಸಕರಾಗಲಿ, ಉಸ್ತುವಾರಿ ಮಂತ್ರಿ ಆಗಲಿ, ಮಾತು ಬಾರದ ಮೂಗ ರಾಗಿ ಕುಳಿತಿರುವುದು. ಅನಂತ್ ಕುಮಾರ್ ಹೆಗಡೆಯವರನ್ನು ಉತ್ತರ ಕನ್ನಡ ಜನತೆ ಅಭಿವೃದ್ಧಿಯ ಬದಲಾಗಿ ಕಟು ಹಿಂದುವಾದಿ ಎನ್ನುವ ಕಾರಣಕ್ಕೆ ಕಳೆದ 25 ವರ್ಷದಿಂದ ಆಯ್ಕೆ ಮಾಡುತ್ತ ಬಂದಿದ್ದಾರೆ.

ಹಾಗಾದರೆ ಅನಂತ್ ಕುಮಾರ್ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಬಲಿಷ್ಠರಾಗಲು ಕಾರಣವೇನು? ಹಾಗಾದರೆ ಮೂರು ದಶಕಗಳ ಹಿಂದಕ್ಕೆ ಹೋಗಬೇಕಾಗುತ್ತದೆ.

1992 ಡಿಸೆಂಬರ್ ಆರರಂದು ಬಾಬರಿ ಮಸೀದಿ ದ್ವಂಸ. ದೇಶದಲ್ಲಿ ಗಲಭೆ ದೊಂಬೆ ನಡೆಯುತ್ತಾದರು ಭಟ್ಕಳದಲ್ಲಿ ಮಾತ್ರ ಏನು ಆಗಲೇ ಇಲ್ಲ ಎನ್ನುವ ರೀತಿಯಲ್ಲಿ ಶಾಂತವಾಗಿತ್ತು. ಭಟ್ಕಳದ ಜನತೆಯ ವರ್ತನೆಯಲ್ಲಿ ಯಾವುದೇ ರೀತಿಯ ಸಂಭ್ರಮವಾಗಲಿ ಅಥವಾ ದುಃಖವಾಗಲಿ ಇರಲಿಲ್ಲ. ಹೀಗೆ ದಿನ ಕಳೆಯುತ್ತಿತ್ತು ಅಂದು ರಾಮನವಮಿಯಂದು ಭಟ್ಕಳದ ಚನ್ನಪಟ್ಟಣ ಮಾರುತಿ ದೇವಸ್ಥಾನದ ಜಾತ್ರೆ ಎಂದು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಿದ್ದರು. ಈ ಸಂಭ್ರಮದಲ್ಲಿರುವಾಗಲೇ ಎಲ್ಲಿಂದಲೋ ಒಂದು ಕಲ್ಲು ತೂರಿಕೊಂಡು ಬಂದು ರಥದ ಮೇಲೆ ಬಿತ್ತು. ಕಲ್ಲು ತೂರಿಕೊಂಡ ಬಂದ ಕಡೆ ಭಕ್ತರು ನೋಡಿದರೆ ಕಟ್ಟಡದ ಮೇಲೆ ಅನ್ಯ ಕೋಮಿನ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಇದು ಏನು ಗೊತ್ತಿರದ ಚಿಕ್ಕ ಮಕ್ಕಳ ಮಾಡಿದ್ದು ಎಂದು ಎಲ್ಲಾ ಭಕ್ತರು ತಿಳಿದು ಸುಮ್ಮನಿದ್ದು ತಮ್ಮ ಊರಿಗೆ ಮರಳಿದರು. ಆದರೆ ಶಾಂತವಾಗಿದ ಭಟ್ಕಳಕ್ಕೆ ಅಶಾಂತಿ ಉಂಟುಮಾಡಲು ಕೆಲವು ದುಷ್ಟರ ಗುಂಪು ಮೊದಲೇ ನಿರ್ಧರಿಸಿದಂತೆ ಕಾಣುತ್ತಿತ್ತು, ಸಾಯಂಕಾಲ 7:30 ರಿಂದ 8 ಗಂಟೆಯ ಸುಮಾರಿಗೆ ಭಟ್ಕಳದ ಜಾತ್ರೆಯಲ್ಲಿ ಹಿಂದೂ ಮುಸ್ಲಿಂ ಗಲಾಟೆ ನಡೆದಿದೆ ಎಂದು ಕಾಳ್ಗಿಚ್ಚಿನಂತೆ ಭಟ್ಕಳದಾದ್ಯಂತ ಸುದ್ದಿ ಹರಡುತ್ತದೆ , ರಾತ್ರಿ ಸಿನಿಮಾಗೆ ಹೋಗಿದ್ದ ಜನರ ಮೇಲೆ ಚಾಕುವಿನಿಂದ ಇರಿಯಲಾಗುತ್ತದೆ. ಇರಿತಕ್ಕೆ ಒಳ್ಳೆಯದಾದ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇರಿತಕ್ಕೆ ಒಳಗಾದವರೆಲ್ಲರೂ ಹಿಂದುಗಳೇ ಎನ್ನುವುದು ತಿಳಿಯುತ್ತದೆ. ಇದು ಮುಸ್ಲಿಮರೇ ಮಾಡಿದ್ದಾರೆಂದು ಹಿಂದುಗಳು ಆರೋಪಿಸಿದರು. ಮುಂದೆ ಇದು ಭಟ್ಕಳದಲ್ಲಿ ಹಿಂದೂ ಮುಸ್ಲಿಂ ಕೋಮು ಗಲಭೆಗೆ ಕಾರಣವಾಗಿ ಕೆಲವು ಮುಸ್ಲಿo ಮತ್ತು ಹಿಂದುಗಳ ಹತ್ಯೆ ನಡೆಯುತ್ತದೆ. ಗಲಭೆ ಯಿಂದಾಗಿ ಭಟ್ಕಳದಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗುತ್ತದೆ. ಇಂತಹ ಸಮಯದಲ್ಲಿ ಭಟ್ಕಳಕ್ಕೆ ಒಬ್ಬ ಯುವಕನ ಆಗಮನವಾಗುತ್ತದೆ. ಹಿಂದೂ ಮುಸ್ಲಿಂ ಮುಖಂಡರು ಭಟ್ಕಳದ ಶಾಂತತೆಗಾಗಿ ಓಡಾಡುತ್ತಿದ್ದರೆ ಭಟ್ಕಳದಲ್ಲಿ ಗಲಭೆ ಮುಂದುವರೆಯುತ್ತಿತ್ತು. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರು ಕರ್ಪ್ಯೂ ವಿಧಿಸಿದರು ಗಲಭೆ ನಿಲ್ಲುವ ಹಾಗೆ ಕಾಣುತ್ತಿರಲಿಲ್ಲ. ಇಂತಹ ಸಮಯದಲ್ಲಿ ಭಟ್ಕಳಕ್ಕೆ ಒಬ್ಬ ಯುವಕನ ಆಗಮನ, ಆ ಯುವಕ ಭಟ್ಕಳದ ಹಳ್ಳಿ ಹಳ್ಳಿ ತಿರುಗಾಡಿ ಹಿಂದುಗಳ ಸಂಘಟನೆ ಮಾಡುವ ಕೆಲಸಕ್ಕೆ ಹೋಗುತ್ತಾನೆ ಹಿಂದೂಗಳನ್ನು ಒಗ್ಗೂಡಿಸುವ ಪ್ರಯತ್ನ ಪಡುತ್ತಾನೆ. ಹೀಗೆ ಹಿಂದುಗಳ ಸಂಘಟನೆ ಮಾಡುತ್ತಿರುವ ಯುವಕ ಯಾರು ಎಂದು ಹಿಂದುಗಳಿಗೂ ಹಾಗೂ ಪೊಲೀಸರಿಗೂ ತಿಳಿಯುತ್ತಿರುವುದಿಲ್ಲ.

ಆದರೆ ಸತತ ಕರ್ಪ್ಯೂ ಜನರು ಬೇಸತ್ತಿ ಹೋಗಿದ್ದರು. ಇದರ ಮಧ್ಯ ಒಂದು ದಿನ ಪೊಲೀಸರು ಅನಂತ್ ಕುಮಾರ್ ಹೆಗಡೆಯವರನ್ನು ಬಂಧಿಸಿದ್ದಾರೆ ಎನ್ನುವ ಸುದ್ದಿ ಭಟ್ಕಳದಾದ್ಯಂತ ಹರಡುತ್ತದೆ. ಈ ಸುದ್ದಿ ಕೇಳಿದ ಜನರು ಪೊಲೀಸ್ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಾರೆ ಮತ್ತು ಪ್ರತಿಭಟನೆ ಮಾಡುತ್ತಾರೆ. ಯಾರು ಈ ಅನಂತ್ ಕುಮಾರ್ ಹೆಗಡೆ ಎಂದು ನೋಡಿದರೆ ಹಿಂದೂಗಳನ್ನು ಹಿಂದೂ ಜಾಗರಣ ವೇದಿಕೆ ಮೂಲಕ ಸಂಘಟಿಸಿದ ಯುವಕನೇ ಈ ಅನಂತ್ ಕುಮಾರ್ ಹೆಗಡೆ ಎನ್ನುವುದು ತಿಳಿಯುತ್ತದೆ .ಅಲ್ಲಿಂದ ಭಟ್ಕಳದ ಗಲಭೆಯ ಚಿತ್ರಣವೇ ಬೇರೆಯಾಗಿ ಹೋಗುತ್ತದೆ. ಭಟ್ಕಳದ ಗಲಭೆ ರಾಜಕೀಯ ವಸ್ತುವಾಗಿ ಮಾರ್ಪಾಡಾಗುತ್ತದೆ. ಅನಂತ್ ಕುಮಾರ್ ಹೆಗಡೆ ಬಂಧನದಿಂದ ಒಂದು ರಾಜಕೀಯ ಪಕ್ಷ ಜೀವ ಪಡೆಯುತ್ತದೆ. ಭಟ್ಕಳದಲ್ಲಿ ಸದ್ದಿಲ್ಲದೇ ಇದ್ದ ಬಿಜೆಪಿ ಪಕ್ಷ ಒಮ್ಮೆಲೇ ಮುನ್ನೆಲೆಗೆ ಬಂದು ಬಿಡುತ್ತದೆ. ಡಾಕ್ಟರ್ ಯು ಚಿತ್ತರಂಜನ್ ಅವರು ಬಿಜೆಪಿಯ ಪಕ್ಷ ನಾಯಕರಾಗುತ್ತಾರೆ. ಭಟ್ಕಳದಲ್ಲಿ ಬಿಜೆಪಿಗೆ ಅಸ್ತಿತ್ವ ತಂದು ಕೊಡುವಲ್ಲಿ ಅನಂತ್ ಕುಮಾರ್ ಹೆಗಡೆ ಯಶಸ್ವಿಯಾಗುತ್ತಾರೆ. ಹೀಗೆ ದಿನಗಳಂತೆ ಅನಂತ್ ಕುಮಾರ್ ಹೆಗಡೆ ರಾಜಕೀಯವಾಗಿ ಬೆಳೆಯುತ್ತಾ ಹೋಗುತ್ತಾರೆ. ಭಟ್ಕಳ ಗಲಭೆಯ ನಂತರ ಅಂದಿನ ಸರ್ಕಾರ ಮತ್ತೊಂದು ಎಡವಟ್ಟು ಮಾಡಿಕೊಳ್ಳುತ್ತದೆ. ಅದು ಏನೆಂದರೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಷ್ಟ್ರಧ್ವಜ ಹಾರಿಸುವುದನ್ನು ನಿಷೇಧಿಸಿ ಕರ್ಫ್ಯೂ ಹಾಕಲಾಗಿರುತ್ತದೆ .ಸ್ವಾತಂತ್ರ್ಯ ಬಂದ ನಂತರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಷ್ಟ್ರಧ್ವಜ ಹಾರಿಸುವುದು ಅಪರಾಧವ ಎಂದು ಪ್ರಶ್ನಿಸಿ ಅಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕರ್ಫ್ಯೂ ಜೊತೆ ಕಂಡಲ್ಲಿ ಗುಂಡು ಆದೇಶ ಇದ್ದರೂ ಕೂಡ ಪ್ರಾಣದ ಹಂಗು ತೊರೆದು ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿ ಅನಂತ್ ಕುಮಾರ್ ಹೆಗಡೆಯವರು ರಾಜ್ಯದ ಜನತೆಯ ಮತ್ತು ರಾಷ್ಟ್ರದ ಮುಂದೆ ಹೀರೋ ಆಗಿ ಕಂಡಿದ್ದಂತೂ ಸತ್ಯ. ಹೀಗೆ ಜೀವದ ಹಂಗು ತೊರೆದು ಹಿಂದುಗಳನ್ನು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಂಘಟನೆ ಮಾಡಿದರ ಪ್ರತಿಫಲವೇ ಇಂದು ಅವರು ಸೋಲಿಲ್ಲದ ಸರದಾರರಾಗಿದ್ದಾರೆ. ಉತ್ತರ ಕನ್ನಡದ ಜನರು ಅವರನ್ನು ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕೆ ಆಯ್ಕೆ ಮಾಡಲಿಲ್ಲ ಬದಲಾಗಿ ಕಟು ಹಿಂದೂವಾದಿ, ಹಿಂದುಗಳ ಸಂಘಟನೆಯನ್ನು ಮಾಡುತ್ತಾರೆ, ಹಿಂದುಗಳ ಪರವಾಗಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವುದು ಉಂಟು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರದೆ ಆದ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡಂತೆ ಸರಿ. ಮೋದಿ ಅಲೆಯಲ್ಲಿ ಲೋಕಸಭೆ ಚುನಾವಣೆ ಚುನಾವಣೆ ಗೆಲ್ಲಬಹುದು ಆದರೆ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಅನಂತ್ ಕುಮಾರ್ ಹೆಗಡೆಯವರ ನಾಯಕತ್ವ ಇಲ್ಲದೆ ಬಿಜೆಪಿಯಿಂದ ಯಾರೊಬ್ಬರೂ ಶಾಸಕರಾಗಲು ಸಾಧ್ಯವಿಲ್ಲ ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ್ ಕುಮಾರ್ ಹೆಗಡೆಯವರ ಕೃಪಾಕಟಾಕ್ಷದಿಂದಲೇ ಕಾಂಗ್ರೆಸ್ ಅಥವಾ ಬಿಜೆಪಿ ತನ್ನ ಶಾಸಕರನ್ನು ಗೆಲ್ಲಿಸುವುದು ಇದು ಜಿಲ್ಲೆಯ ಜನರು ತಿಳಿದುಕೊಂಡಿರುವ ಕಟು ಸತ್ಯ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ್ ಕುಮಾರ್ ಹೆಗಡೆ ಇಲ್ಲದೆ ಬಿಜೆಪಿ ಇರಲು ಸಾಧ್ಯವೇ ಇಲ್ಲ. ಅನಂತ್ ಕುಮಾರ್ ಹೆಗಡೆಯವರ ನಾಯಕತ್ವ ನಿರಾಕರಿಸಿದರೆ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡಂತೆ ಸರಿ.

Leave a Reply

Your email address will not be published. Required fields are marked *

error: Content is protected !!