ಭಟ್ಕಳ: ಜಿ.ಎಸ್.ಬಿ ವಾರ್ಷಿಕೋತ್ಸವ ೨೦೨೪

Share

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೬ನೇ ವಾರ್ಷಿಕೋತ್ಸವವು ದಿ. ೧೧.೦೨.೨೦೨೪ ರಂದು
ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಅಂತರಾಷ್ಟಿçÃಯ ಪವರ ಲಿಫ್ಟಿಂಗ್ ಕ್ರೀಡಾಪಟು ಶ್ರೀ ವೆಂಕಟೇಶ ಪ್ರಭು ರವರು ಭಟ್ಕಳ ಜಿ.ಎಸ್.ಎಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳು, ಫಿಟ್-ಜಿ.ಎಸ.ಬಿ ಭಟ್ಕಳ ಯೋಜನೆ ಪರಿಕಲ್ಪನೆಯನ್ನು ಶ್ಲಾಘಿಸಿ, ಯುವಕ ಯುವತಿಯರು ಶಿಕ್ಷಣದ ಜೊತೆಯಲ್ಲಿ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಕೊಳ್ಳುವಂತೆ ತಿಳಿಸಿದರು.
ಗೌರವಾಧ್ಯಕ್ಷರಾದ ಶ್ರೀ ನರೇಂದ್ರ ನಾಯಕರವರು ಜಿ.ಎಸ್.ಎಸ್ ಬೆಳೆದು ಬಂದ ಹಾದಿಯನ್ನು ತಿಳಿಸುತ್ತಾ, ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ, ಸರ್ವರೂ ಮಾತೃಭಾಷೆ ಬಳಕೆಯನ್ನು, ನಮ್ಮ ನಾಡು-ನುಡಿ-ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಹನುಮಂತ ಮಾಳಪ್ಪ ಪೈ (ಪುತ್ತು ಪೈ) ರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರ ವನ್ನು ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ಕಾಮತ ರವರಿಗೆ, ಶ್ರೀ ಕೆ.ಎಂ.ನಾಯಕ ಸಾಧಕ ಪುರಸ್ಕಾರವನ್ನು ಪಾದಯಾತ್ರೆಯ ಮುಖೇನ ಧರ್ಮಜಾಗೃತಿಗೆ ಪ್ರೇರಣೆ ನೀಡುತ್ತಿರುವ ವೆ.ಮೂ ವಿನೋದ ಭಟ್ ರವರಿಗೆ, ಶ್ರೀಮತಿ ತಾರಾಬಾಯಿ ಹನುಮಂತ ಶಾನಭಾಗ ಸ್ಮರಣಾರ್ಥ ಆದರ್ಶ ಸದ್ಗçಹಿಣಿ ಪರಸ್ಕಾರವನ್ನು ಶ್ರೀಮತಿ ರೂಪಾ ಲಕ್ಷö್ಮಣ ಕಾಮತರಿಗೆ ನೀಡಲಾಯಿತು. ಕರಾಟೆಯಲ್ಲಿ ಸಾಧನೆಗೈದ ಸಮಾಜದ ಯುವತಿ ಕುಮಾರಿ ಅಂಜಲಿ ನಾಗರಾಜ ಕಾಮತರನ್ನು ಸನ್ಮಾನಿಸಲಾಯಿತು.
ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಕಲ್ಪೇಷ ಪೈ, ಮಹಿಳಾ ಸಮಿತಿ ಅಧ್ಯಕ್ಷರಾದ ಸುನಿತಾ ಪೈ, ಗೌರವಾಧ್ಯಕ್ಷ ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿ.ಎಸ್.ಬಿ ಸಮಾಜ ಬಾಂಧವರಿAದ ರಾಷ್ಟçಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ, ಲಕ್ಕಿ ಜಿ.ಎಸ.ಬಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಸನ್ನ ಪ್ರಭು, ಗುರುದಾಸ್ ಪ್ರಭು ರವರು ಕಾರ್ಯಕ್ರಮ ನಿರೂಪಿಸಿದರು, ದೀಪಕ ನಾಯಕ ಸ್ವಾಗತಿಸಿದರು, ನಕುಲ ಕಾಮತ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!