ಭಟ್ಕಳ ತೆಂಗಿನಗುAಡಿಯ ವೃತ್ತ ಬಳಿಯಿರುವ ದ್ವಜಕಟ್ಟೆ ತೆರವು; ಆಕ್ರೋಶಗೊಂಡ ಹಿಂದು ಕಾರ್ಯಕರ್ತರಿಂದ
ಪುನ: ಸ್ಥಾಪನೆ
ಮಂಡ್ಯದಲಿ ್ಲ ನಡೆದ ಹನುಮನ ದ್ವಜ ತೆರವು ಪ್ರಕರಣ ಮಾಸುವ ಮೊದಲೇ ಭಟ್ಕಳದ ಹೆಬಳೆ ಗ್ರಾಮ ಪಂಚಾಯತಿ
ವ್ಯಾಪ್ತಿಯ ತೆಂಗಿನಗುAಡಿಯ ವೀರ ಸಾರ್ವಕರ್ ವೃತ್ತದ ದ್ವಜಕಟ್ಟೆ ಹಾಗು ನಾಮಫಲಕವನ್ನು ಅಧಿಕಾರಿಗಳು ತೆರವುಗೊಳಿಸಿರುವುದು ಹಿಂದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿ.ಜೆ.ಪಿ ಮುಖಂಡ ಗೋವಿಂದನಾಯ್ಕ ನೇತೃತ್ವದಲ್ಲಿ ಬಿ.ಜೆ.ಪಿ ಹಾಗು ಹಿಂದು ಕಾರ್ಯಕರ್ತರು ಹೆಬಲೆ ಗ್ರಾಂಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು. ವೀರ ಸಾರ್ವಕರ್ ವೃತ್ತಕ್ಕೆ ಅನುಮತಿ ಪಡೆದು ಅಳವಡಿಸಲಾಗಿದ್ದರು, ಪಿ.ಡಿ.ಓ ಅಕ್ರಮವಾಗಿ ತೆರವುಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪೊಲೀಸ್ ಮತ್ತು ಪಿ.ಡಿ.ಓ ವಿರೋಧದ ನಡುವೆಯು ಬಿ.ಜೆ.ಪಿ ಮುಖಂಡ ಗೋವಿಂದನಾಯ್ಕ ನೇತೃತ್ವದಲ್ಲಿ ಬಿ.ಜೆ.ಪಿ ಹಾಗು ಹಿಂದು ಕಾರ್ಯಕರ್ತರು ವೀರ ಸಾರ್ವಕರ್ ವೃತ್ತದ ದ್ವಜಕಟ್ಟೆ ಹಾಗು ನಾಮಫಲಕವನ್ನು ಪುನ: ಸ್ಥಾಪನೆ ಮಾಡಿದರು.
ಬೂದಿ ಮುಚ್ಚಿದ ಕೆಂಡದAತೆ ಇರುವ ಭಟ್ಕಳಕ್ಕೆ ಒಂದು ತಿಂಗಳೊಳಗೆ ಇದು ಎರಡನೇ ಪ್ರಕರಣವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಜಾಲಿಯ ದೇವಿನಗರದ ನಾಮಫಲಕೆ ಅಳವಡಕೆಯ ಕುರಿತು ಹಿಂದು ಮತ್ತು ಮುಸ್ಲಿಂರ
ಮದ್ಯ ವಾದ ವಿವಾದ ನಡೆದು ಪೊಲೀಸ್ ರ ಮದ್ಯಸ್ಥತಿಯಲ್ಲಿ ಪ್ರಕರಣ ತಿಳಿಗೊಳಿಸಿರುವುದು ಇಲ್ಲಿ ಸ್ಮರಿಸಬಹುದು.
