ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ೨೬ನೇ ವಾರ್ಷಿಕ ಸ್ನೇಹಸಮ್ಮೇಳನದ ಪ್ರಯುಕ್ತ ವಡೇರ ಮಠ ಮೈದಾನದಲ್ಲಿ ಕ್ರೀಡೋತ್ಸವ-೨೦೨೪ ಎಂಬ ಭಟ್ಕಳ ಜಿ.ಎಸ.ಬಿ ಸಮಾಜ ಬಾಂಧವರ ಅಥ್ಲೆಟಿಕ್ಸ್-ಆಟೋಟ ಸ್ಪರ್ಧೆಯು ಜರುಗಿತು. ಸಾಂಪ್ರದಾಯಿಕ ಆಟವಾದ ಚಿಟ್-ಬಿಲ್ ನಿಂದ ಗುರಿಯಿಡುವುದರ ಮೂಲಕ ಗೌರವಾಧ್ಯಕ್ಷರಾದ ನರೇಂದ್ರ ನಾಯಕ ಕ್ರೀಡೋತ್ಸವ ವನ್ನು ಉದ್ಘಾಟಿಸಿದರು. ಸಮಾಜದ ಮಕ್ಕಳು, ಮಹಿಳೆಯರು, ಹಿರಿಯನಾಗರಿಕರಿಗಾಗಿ ಗುಂಡು ಎಸೆತ, ಹಗ್ಗ ಜಗ್ಗಾಟ, ಗೋಟಿ, ಸಂಗೀತ ಖುರ್ಚಿ ಹಾಗೂ ಇನ್ನಿತರೆ ಸ್ಪರ್ಧೆಗಳನ್ನು ಜರುಗಿಸಲಾಯಿತು. ಸಮಾಜದ ಫಿಟ್ನೆಸ್ ರಾಯಭಾರಿಗಳಾದ ಕರಾಠೆ ತರಬೇತುದಾರೆ ಕುಮಾರಿ ಅಂಜಲಿ ಎನ್ ಕಾಮತ ಹಾಗೂ ಕ್ರೀಡಾಪಟು ವಿಕ್ರಮ ವಿ ಪ್ರಭು ರವರು ಫಿಟ್ ಇಂಡಿಯಾ ಮಾದರಿಯಲ್ಲಿ ಸಮಾಜ ಬಾಂಧವರ ಉತ್ತಮ ಆರೋಗ್ಯಕ್ಕಾಗಿ ಫಿಟ್-ಜಿ.ಎಸ.ಬಿ ಭಟ್ಕಳ ಎಂಬ ಯೋಜನೆಗೆ ಚಾಲನೆ ನೀಡಿದರು.
ಪ್ರಮುಖರಾದ ಸುಬ್ರಾಯ ಕಾಮತ, ಕಲ್ಪೇಶ ಪೈ, ಸುನಿತಾ ಪೈ, ದೀಪಕ ನಾಯಕ, ವಿಘ್ನೇಶ ಪೈ, ಗುರುದಾಸ ಪ್ರಭು ಸಹಿತ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.