ಗಂಗೆಯ ಪವಿತ್ರ ಘಟ್ಟದಲ್ಲಿ ಸ್ನಾನ ಮಾಡುವ ಮಹಿಳೆಯರ ವಿಡಿಯೋ ಮತ್ತು ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ !
ಆಕ್ಷೇಪಾರ್ಹ ವಿಡಿಯೋ ಛಾಯಾಚಿತ್ರಗಳನ್ನು ತೆಗೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗಕ್ಕೆ ದೂರು !
ದೆಹಲಿ – ಮಹಿಳೆಯರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಮಹಿಳೆ ಮತ್ತು ಅಪ್ರಾಪ್ತ ಹುಡುಗಿಯರ ಅಶ್ಲೀಲ ಮತ್ತು ಕಾನೂನುಬಾಹಿರ ವಿಡಿಯೋ, ಛಾಯಾಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವ ಹೀರೋ ಸಿಟಿ ಬ್ಲಾಗ್, ಹರಿದ್ವಾರ್ ಬ್ಲಾಗ್, ಗೋವಿಂದ ಯುಕೆ ಬ್ಲಾಗ್, ಅದ್ಭುತ ಬ್ಲಾಗ್, ಶಾಂತಿ ಕೂಂಜ ಹರಿದ್ವಾರ ಬ್ಲಾಗ್, ಮತ್ತು ಇತರ ತಪ್ಪಿತಸ್ಥರ ಮೇಲೆ ಭಾ. ದಂ.ವಿ. ಸಂಹಿತೆಯ ಕಲಂ 354c /509, ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ 66E /67/67A ಮತ್ತು ಪೋಕ್ಸೋ ಕಾನೂನಿನ ಅಂತರ್ಗತ ಕಲಂ 14 ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಂಜಾಬ ಮೊಗಾ ಇಲ್ಲಿಯ ನ್ಯಾಯವಾದಿ ಅಜಯ ಗುಲಾಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ದೆಹಲಿಯ ನ್ಯಾಯವಾದಿ ಅಮಿತಾ ಸಚದೇವ ಇವರು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಈ ದೂರಿನಲ್ಲಿ ಅವರು, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದ್ಯ ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ಆಘಾತಕಾರಿ ಮತ್ತು ಆಕ್ಷೇಪಾರ್ಹ ವಿಷಯ ಪ್ರಸಾರ ಮಾಡಲಾಗುತ್ತಿದೆ. ಇದರಲ್ಲಿ ಈಗ ಪ್ರಮುಖವಾಗಿ ಬೇರೆ ಬೇರೆ ಬ್ಲಾಗರ್ಸ್ ಗಳಿಂದ ಹಣದ ಆಸೆಗಾಗಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವ ಮಹಿಳೆಯರ ರಹಸ್ಯ ವಿಡಿಯೋ, ರೀಲ್ ಶಾರ್ಟ್ಸ್ ತಯಾರಿಸುವುದು, ಛಾಯಾಚಿತ್ರಗಳನ್ನು ತೆಗೆಯುವುದು ಮತ್ತು ಅವರ ಅನುಮತಿ ಇಲ್ಲದೆ ವಿವಿಧ ಇಂಟರ್ನೆಟ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ನಡೆಯುತ್ತಿದೆ. ಈ ಘಟನೆಗಳಿಂದ ಸಮಾಜದಲ್ಲಿನ ಅನೇಕ ಮಹಿಳೆಯರಿಗೆ ಅವರ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರ ಎದುರು ಅಪಮಾನಾಸ್ಪದ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ನಾಚಿಕೆ ಪಡಬೇಕಾಗಿದೆ. ಹಾಗೂ ಈ ವಿಡಿಯೋ ಛಾಯಾಚಿತ್ರಗಳ ಕೆಳಗೆ ಬರೆದಿರುವ ಅಶ್ಲೀಲ ಮತ್ತು ಆಕ್ಷೇಪಾರ್ಹ ಪ್ರತಿಕ್ರಿಯೆಗಳಿಂದ (ಕಮೆಂಟ್ಸ್ ಗಳಿಂದ) ಅವರ ಪ್ರತಿಷ್ಠೆ ಮತ್ತು ಪ್ರತಿಮೆಗೆ ಧಕ್ಕೆ ಬರುತ್ತಿದೆ. ಇಂತಹ ಅಸಂಖ್ಯ ಅಪರಿಚಿತ ವ್ಯಕ್ತಿಗಳಿಂದ ನಡೆಯುವ ಕಿರುಕುಳ ಮತ್ತು ಅವಮಾನ ಯಾವುದೇ ಸಭ್ಯ ಮಹಿಳೆ ಸಹಿಸಲು ಸಾಧ್ಯವಿಲ್ಲ. ಇಂತಹ ವಿಡಿಯೋ ಛಾಯಾಚಿತ್ರಗಳು ಸುಸಂಸ್ಕೃತ ಸಮಾಜಕ್ಕೆ ಕಳಂಕವಾಗಿದೆ.
ಆದ್ದರಿಂದ ಗಂಗಾ ನದಿಯ ಉಗಮದಿಂದ ಗಂಗಾ ಸಾಗರದವರೆಗೆ ವಿಭಿನ್ನ ಪವಿತ್ರಘಟ್ಟಗಳಲ್ಲಿ ವಿಡಿಯೋಗ್ರಾಫಿ ಮತ್ತು ಛಾಯಾಚಿತ್ರ ತೆಗೆಯಲು ಸರಕಾರದಿಂದ ತಕ್ಷಣ ನಿಷೇಧ ಹೇರುವ ಆವಶ್ಯಕತೆ ಇದೆ. ಹಾಗೂ ಇಂತಹ ಕೃತ್ಯ ಮಾಡುವ ತಪ್ಪಿತಸ್ಥರ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮುಂತಾದ ಮಾಧ್ಯಮಗಳಲ್ಲಿ ಎಲ್ಲಾ ಆಕ್ಷೇಪಾರ್ಹ ವಿಡಿಯೋ, ಛಾಯಾಚಿತ್ರಗಳು, ರೀಲ್ಸ್ ಮತ್ತು ಶಾರ್ಟ್ಸ್ ತಕ್ಷಣ ಡಿಲೀಟ್ ಮಾಡುವ ಸೂಚನೆ ಸರಕಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮಹಿಳೆ ಅಥವಾ ಅಪ್ರಾಪ್ತ ಹುಡುಗಿಯರ ಅಪಪ್ರಚಾರ ಮಾಡುವ ವಿಡಿಯೋ ಛಾಯಾಚಿತ್ರಗಳು ಯಾರೆಲ್ಲ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಅವರಿಗೆ ಕೇವಲ ಆರ್ಥಿಕ ದಂಡವಷ್ಟೇ ಅಲ್ಲ, ಅವರ ಮೇಲೆ ಗಂಭೀರ ಅಪರಾಧಕ್ಕಾಗಿ ಭಾ. ದಂ.ವಿ. ಸಂಹಿತೆಯ ಅಂತರ್ಗತ ದೂರು ದಾಖಲಿಸಿ ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.